ತೊಗರ್ಸಿ ಬಳಿ ಬೈಕ್ಗೆ ವ್ಯಾನ್ ಡಿಕ್ಕಿ: ವ್ಯಕ್ತಿ ಸಾವು
ಶಿರಾಳಕೊಪ್ಪ: ಸಮೀಪದ ತೊಗರ್ಸಿ ಬಳಿ ವ್ಯಾನ್ ಹಾಗೂ ಬೈಕ್ ಮಧ್ಯೆ ಡಿಕ್ಕಿ ಸಂಭವಿಸಿ ಒಬ್ಬರು ಮೃತಪಟ್ಟು ಮೂವರಿಗೆ ತೀವ್ರ ಪೆಟ್ಟಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೃತವ್ಯಕ್ತಿ ಜಗದೀಶ್(40) ಎಂದು ಗುರುತಿಸಲಾಗಿದ್ದು, ಸೊರಬ ತಾಲೂಕಿನ ಆನವಟ್ಟಿ ಬಳಿಯ ನೇರಲಗಿ ಗ್ರಾಮದವರೆಂದು ತಿಳಿದು ಬಂದಿದೆ. ಶಂಕ್ರಪ್ಪ, ವೀರೇಂದ್ರ, ಭರತ್ನನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಕರಣ ದಾಖಲಾಗಿದೆ.
ಲಾರಿ ಹರಿದು ವ್ಯಕ್ತಿ ಸಾವು
ಶಿರಾಳಕೊಪ್ಪ ಸಮೀಪದ ಭೋಗಿ ಗ್ರಾಮದಲ್ಲಿ ಬೈಕ್ಗೆ ಲಾರಿ ಡಿಕ್ಕಿಹೊಡೆದು ವ್ಯಕ್ತಿಯೊಬ್ಬರು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಮೃತರನ್ನು ನೂರುದ್ದೀನ್ ಬೇಗ್(19) ಎಂದು ಗುರುತಿಸಲಾಗಿದ್ದು, ಗಾಯಗೊಂಡ ವ್ಯಕ್ತಿ ಅಬ್ದುಲ್ ಖಲೀಲ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿಕಾರಿಪುರ ವೃತ್ತ ನಿರೀಕ್ಷಕ ಮಾದಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಮಹಿಳೆ ಕಾಣೆ
ಭದ್ರಾವತಿ: ಮೇ 20 ರಂದು ಬೆಳಗ್ಗೆ 7.30 ಗಂಟೆಗೆ ವಾಯುವಿಹಾರಕ್ಕೆಂದು ಹೋದ ಸಿದ್ದಾರೂಢ ನಗರದ ವಾಸಿ ಸುಶೀಲಮ್ಮ ಇದುವರಗೆ ಹಿಂದಿರುಗಿ ಬಂದಿಲ್ಲವೆಂದು ಅವರ ಮಗ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಸುಶೀಲಮ್ಮ ಅವರಿಗೆ 58 ವರ್ಷ ವಯಸ್ಸಾಗಿದ್ದು ಐದು ಅಡಿ ಎತ್ತರವಿದ್ದಾರೆ. ಬಳಿ ಬಣ್ಣ ಸಾಧಾರಣ ಮೈಕಟ್ಟನ್ನು ಹೊಂದಿರುವ ಇವರು ನೀಲಿ ಬಣ್ಣದ ಸೀರೆ, ನೀಲಿ ಬಣ್ಣದ ರವಿಕೆ ಧರಿಸಿದ್ದಾರೆ. ಕನ್ನಡ, ತೆಲುಗು ಮಾತನಾಡಬಲ್ಲ ಇವರ ಬಗ್ಗೆ ಸುಳಿವು ಸಿಕ್ಕಲ್ಲಿ ಪೊಲೀಸ್ ಠಾಣೆಗೆ (ದೂ.08282-266343) ತಿಳಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.