ಸುಮೇಧಗೆ ಪ್ರಥಮ ಸ್ಥಾನ
ತೀರ್ಥಹಳ್ಳಿ: ಆಯುರ್ವೇದ ವೈದ್ಯ ಸ್ನಾತಕೋತ್ತರ ಪ್ರವೇಶ ಪರೀಕ್ಷೆಯಲ್ಲಿ ಡಾ. ಸುಮೇಧ ಕೆ.ಎ. ಪ್ರಥಮ ಸ್ಥಾನಗಳಿಸಿದ್ದಾರೆ. ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ಆಯುರ್ವೇದ ಸ್ನಾತಕೋತ್ತರ ಪ್ರವೇಶ ಪರೀಕ್ಷೆಯಲ್ಲಿ ಈ ಸಾಧನೆ ಮಾಡಿಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನಲ್ಲಿ ವೈದ್ಯ ಪದವಿಗಳಿಸಿದ್ದಾರೆ. ತೀರ್ಥಹಳ್ಳಿ ತಾಲೂಕಿನ ಹಿರೇಸರ ಕಟ್ಟೆ ಅನಂತಮೂರ್ತಿ- ರಾಜೇಶ್ವರಿ ದಂಪತಿಗಳ ಪುತ್ರರಾಗಿರುವ ಇವರು ತಮ್ಮ ಈ ಸಾಧನೆಯಿಂದ ಕೀರ್ತಿ ತಂದಿದ್ದಾರೆ.
ಬಾಲಕಾರ್ಮಿಕ ಶಾಲೆಗೆ ಸೇರ್ಪಡೆ
ಶಿವಮೊಗ್ಗ: ಕೆಳದಿ ಚೆನ್ನಮ್ಮ ರಸ್ತೆ- ಶರಾವತಿ ನಗರದಲ್ಲಿರುವ ಸ್ಟಾರ್ ಬೈಕ್ ಜೋನ್ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 12 ವರ್ಷ ವಯಸ್ಸಿನ ಬಾಲಕಾರ್ಮಿಕ ಇರ್ಫಾನ್ ನೂರುಲ್ಲಾ ಷರೀಫ್ನನ್ನು ಸಂಸ್ಥೆಯಿಂದ ಮುಕ್ತಗೊಳಿಸಿ, ಶಾಲೆಗೆ ದಾಖಲಿಸಲಾಗಿದೆ ಎಂದು ಕಾರ್ಮಿಕ ಅಧಿಕಾರಿ ಎಂ.ಪಿ. ವಿಶ್ವನಾಥ್ ತಿಳಿಸಿದ್ದಾರೆ. ಸ್ಟಾರ್ ಬೈಕ್ ಜೋನ್ ಮಾಲೀಕ ನ್ಯಾಮತ್ ವಿರುದ್ಧ ಬಾಲಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.