9ರಂದು ತುಳು ಕೂಟದ ಆಶ್ರಯಲ್ಲಿ ತುಳು ಉತ್ಸವ
ಕ.ಪ್ರ.ವಾರ್ತೆ, ಭದ್ರಾವತಿ, ಜೂ. 6
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಭದ್ರಾವತಿಯ ತುಳು ಕೂಟದ ಸಂಯುಕ್ತ ಆಶ್ರಯದಲ್ಲಿ ಜೂ.9ರಂದು ಭಾನುವಾರ ಪಟ್ಟಣದ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ತುಳು ಉತ್ಸವ - 2013ನ್ನು ಆಚರಿಸಲಾಗುವುದು.
ಉತ್ಸವವನ್ನು ಶಾಸಕ ಎಂ.ಜೆ. ಅಪ್ಪಾಜಿ ಬೆಳಗ್ಗೆ 8.30 ಗಂಟೆಗೆ ಉದ್ಘಾಟಿಸುವರು. ಉಡುಪಿ ಜಿಲ್ಲೆ ಶಿರ್ವದ ಸೇಂಟ್ಮೇರಿಸ್ ಪ.ಪೂ.ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಎಸ್. ಪದ್ಮನಾಭ ಭಟ್ ಉಪನ್ಯಾಸ ನೀಡುವರು.