ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಅಲ್ಪಸಂಖ್ಯಾತರ ಸಾಲ ಮನ್ನಾ

Mainashree
Updated On : 8 Jun 2013, 12:07 pm

ಶಿವಮೊಗ್ಗ: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ಆರಂಭದಿಂದ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳಾದ ಸ್ವಾವಲಂಬನಾ ಮಾರ್ಜಿನ್ ಸಾಲ ಮತ್ತು ಸಹಾಯ ಧನ ಯೋಜನೆ, ಅರಿವು ವಿದ್ಯಾಭ್ಯಾಸದ ಸಾಲದ ಯೋಜನೆ, ಗಂಗಾ ಕಲ್ಯಾಣ ಯೋಜನೆ, ಶ್ರಮಶಕ್ತಿ ಸಾಲದ ಯೋಜನೆ, ಭೂ ಖರೀದಿ ಯೋಜನೆ, ಮೈಕ್ರೋ ಸಾಲ ಮತ್ತು ಸಹಾಯ ಧನ ಯೋಜನೆ ಹಾಗೂ ರಾಷ್ಟ್ರೀಯ ಅಲ್ಪಸಂಖ್ಯಾತರ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ನೇರಸಾಲ ಯೋಜನೆಗಳಲಿ ಸಾಲ ಪಡೆದು ಮರುಪಾವತಿಗೆ ಬಾಕಿ ಇರುವ ಅಸಲು ಮತ್ತು ಅದರ ಮೇಲಿನ ಬಡ್ಡಿಯನ್ನು ಕರ್ನಾಟಕ ಸರ್ಕಾರವು ಸಾಲ ಮನ್ನಾ ಮಾಡಿದೆ. ಆದ್ದರಿಂದ ಸಾಲ ಪಡೆದ ಫಲಾನುಭವಿಗಳು ಸಾಲ ಮರುಪಾವತಿ ಮಾಡುವ ಅಗತ್ಯತೆ ಇರುವುದಿಲ್ಲ. ಈ ಬಗ್ಗೆ ಮಧ್ಯವರ್ತಿಗಳಾಗಲೀ ಅಥವಾ ಬೇರೆ ಯಾರಾದರೂ ಮರುಪಾವತಿಗೆ ಒತ್ತಾಯಿಸಿದಲ್ಲಿ ಅಥವಾ ಮರುಪಾವತಿ ಹಣವನ್ನು ಪಡೆದಲ್ಲಿ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಶಿವಮೊಗ್ಗ ಇವರಿಗೆ ತಿಳಿಸುವಂತೆ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ. ಮಾಹಿತಿಗಾಗಿ ಜಿಲ್ಲಾ ಕಚೇರಿ ದೂ.ಸಂ.-08182-228262

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement