ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಪಶುಸಂಗೋಪನೆ ಮಾಹಿತಿ ಕಾರ್ಯಕ್ರಮ

Mainashree
Updated On : 8 Jun 2013, 12:07 pm

ಸೊರಬ: ದೇಶದ ಬೆನ್ನೆಲುಬು ರೈತ, ರೈತನ ಬೆನ್ನೆಲುಬು ಗೋವು, ಗೋವಿಲ್ಲದ ಕೃಷಿಯನ್ನು ನೆನೆಯುವುದು ಕಷ್ಟ. ಹಾಗಾಗಿ ಕೃಷಿಕನಿಗೆ ಪಶುಸಂಗೋಪನೆ ಕೇವಲ ಕೃಷಿಗೆ ಪೂರಕವಾಗಿ ಅಲ್ಲದೆ ಉಪಜೀವನವೂ ಹೌದು ಎಂದು ಎಸ್ಕೆಡಿಆರ್‌ಡಿಪಿ ಚಂದ್ರಗುತ್ತಿ ವಲಯದ ಮೇಲ್ವಿಚಾರಕ ಸುರೇಶ್ ಹೆಗ್ಡೆ ತಿಳಿಸಿದರು.
 ತಾಲೂಕಿನ ಹುಲೆಮರಡಿ ಗ್ರಾಮದಲ್ಲಿ ಎಸ್ಕೆಡಿಆರ್‌ಡಿಪಿ ಯೋಜನೆಯಿಂದ ಏರ್ಪಡಿಸಿದ್ದ ಪಶು ಸಂಸ್ಕೃತಿ, ಪಶುಸಂಗೋಪನೆ ಕುರಿತ ಮಾಹಿತಿ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತನಾಡಿದರು. ಪ್ರಸ್ತುತ ಕೃಷಿ ಚಟುವಟಿಕೆಯಲ್ಲಿ ಸಹಜ ಕೃಷಿ, ಸಾವಯವ ಕೃಷಿಯ ಅಗತ್ಯವಿದೆ. ಭೂಮಿಯ ಬಂಜೆತನವನ್ನು ನಿವಾರಿಸಲು ಪಾರಂಪರಿಕ ಕೃಷಿ ಹೊರತುಪಡಿಸಿ ಬೇರೆ ಯಾವುದೆ ಪರ್ಯಾಯ ವ್ಯವಸ್ಥೆಯಿಲ್ಲ. ಈ ನಿಟ್ಟಿನಲ್ಲಿ ಶ್ರೀ ಕ್ಷೇಧಗ್ರಾಯೋಜನೆಯಲ್ಲಿ ಪಶು ಸಂಗೋಪನೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಕೃಷಿಕನ ಕೃಷಿ ಶ್ರೀಮಂತಗೊಳಿಸುವುದರೊಂದಿಗೆ ಆತನ ಬದುಕಿಗೆ ನೆಮ್ಮದಿಯ ಆಶ್ರಯ ನೀಡುವ ಗುರಿ ಹೊಂದಲಾಗಿದೆ ಎಂದರು.
 ಯೋಜನೆಯ ಫಲಾನುಭವಿಗಳಿಗೆ ಹೈನುಗಾರಿಕೆ ಅಧಿಕಾರಿ ಬಸವರಾಜ್‌ಹೈನುಗಾರಿಕೆ ಕುರಿತ ಸಮಗ್ರ ಮಾಹಿತಿ ನೀಡಿದರು. ಸೇವಾ ಪ್ರತಿನಿಧಿ ಕುಮಾರ್, ಯೋಜನಾ ಸಂಘದ ಅಧ್ಯಕ್ಷ ಕೆರೆಯಪ್ಪ, ನಾಗರಾಜ್, ಹನುಮಂತಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement