ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸುದ್ದಿ ಸಂಕ್ಷೇಪ

Mainashree
Updated On : 9 Jun 2013, 10:50 am

ಪೋಷಕ ಸದಸ್ಯತ್ವ ಅಭಿಯಾನ
ಶಿವಮೊಗ್ಗ: ಶಿವಮೊಗ್ಗ ಬೆಳ್ಳಿಮಂಡಲವು ಇದೀಗ ನಾಲ್ಕನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು, ಈ ಸಾಲಿನಲ್ಲಿ ಪೋಷಕ ಸದಸ್ಯತ್ವ ಅಭಿಯಾನವನ್ನು ಆರಂಭಿಸಿದೆ ಎಂದು ಸಂಚಾಲಕ ವೈದ್ಯ ಹೇಳಿದ್ದಾರೆ. ಈ ವರ್ಷದ ಚಟುವಟಿಕೆಗಳು ಆಗಸ್ಟ್ ಮೊದಲ ವಾರದಿಂದ ಆರಂಭವಾಗಲಿದ್ದು, ಮುಂದಿನ ಆಗಸ್ಟ್ ವರೆಗಿನ ಒಂದು ವರ್ಷದಲ್ಲಿ ಪ್ರತೀ ಎರಡು ತಿಂಗಳಿಗೊಮ್ಮೆ ಎರಡು ದಿನಗಳ ತಲಾ ಮೂರು ಸಿನಿಮಾ ಉತ್ಸವಗಳು, ಮಕ್ಕಳ ಚಿತ್ರೋತ್ಸವಗಳು, ಅಂತರಾಷ್ಟ್ರೀಯ ಚಿತ್ರೋತ್ಸವ, ದಸರಾ ಚಿತ್ರೋತ್ಸವ ಸೇರಿದಂತೆ ಹಲವು ಚಿತ್ರೋತ್ಸವಗಳು, ಚಲನಚಿತ್ರ ರಸಗ್ರಹಣ ಶಿಬಿರಗಳು, ಚಲನಚಿತ್ರ ಕಲಾವಿದರು, ತಂತ್ರಜ್ಞರೊಂದಿಗೆ ಸಂವಾದಗಳನ್ನು ನಡೆಸಲು ಚಿಂತನೆ ನಡೆಸಲಾಗಿದೆ.  
ಚಲನಚಿತ್ರ ಅಭಿಮಾನಿಗಳು ಶಿವಮೊಗ್ಗ ಬೆಳ್ಳಿಮಂಡಲಕ್ಕೆ  ಪೋಷಕ ಸದಸ್ಯರಾಗುವುದರ ಮೂಲಕ ಸಂಸ್ಥೆಯನ್ನು ಬಲಪಡಿಸುವಂತೆ ವಿನಂತಿಸಿದ್ದಾರೆ. ಪೋಷಕ ಸದಸ್ಯತ್ವಕ್ಕಾಗಿ ವೈದ್ಯ 98444 56505, ಚೇತನ್ 98441 53534, ಡಾ. ನಾಗಭೂಷಣ 94492 84495, ಆನಂದ 94482 55500, ಬಿ.  ರವೀಶ 94497 16571, ಪ್ರಸಾದ್ ಮಧು) 98440 19767, ಜಿ. ವಿಜಯ ಕುಮಾರ್ 94481 05198, ಮಧುಸೂಧನ 94481 27254,  ಸುರೇಶ್ 98862 08780,  ಸೀನಪ್ಪಶೆಟ್ಟಿ ಅಥವಾ ಬೆಳ್ಳಿಮಂಡಲ ಕಾರ್ಯಕರ್ತರನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement