ಸುದ್ದಿ ಸಂಕ್ಷೇಪ
ನೃತ್ಯ ಶಾಲೆ ಸ್ಥಗಿತ
ಶಿವಮೊಗ್ಗ: ನಗರದ ದಿ ಫಸ್ಟ್ ಡ್ಯಾನ್ಸ್ ಸ್ಕೂಲ್ ಕಳೆದ ಎರಡು ವರ್ಷಗಳಿಂದ ನೃತ್ಯ ತರಬೇತಿ ನೀಡುತ್ತಿದ್ದು, ಕೆಲವು ತೊಂದರೆಗಳಿಂದ ನೃತ್ಯ ಶಾಲೆಯನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದು ಸ್ಕೂಲ್ನ ಕೆ. ಸಿಂಧು ತಿಳಿಸಿದ್ದಾರೆ. ವಿವರಗಳಿಗಾಗಿ- 9880559439.
ಶಿವಕುಮಾರ್ ಆಯ್ಕೆ
ಶಿವಮೊಗ್ಗ: ಸಿಟಿ ಕೋ-ಆಪರೇಟಿವ್ಬ್ಯಾಂಕ್ನ ನೂತನ ನಿರ್ದೇಶಕರಾಗಿ ಎಚ್. ಶಿವಕುಮಾರ್ ಅವರನ್ನು ನೇಮಕ ಮಾಡಲಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಎಸ್.ಕೆ ಮರಿಯಪ್ಪ ತಿಳಿಸಿದ್ದಾರೆ.
ಅರ್ಜಿ ಆಹ್ವಾನ
ಶಿವಮೊಗ್ಗ: ನಗರದ ಜಿಲ್ಲಾ ವೀರಶೈವ ಪಂಚಮಸಾಲಿ ಮಹಿಳಾ ಘಟಕ ಸಮುದಾಯದ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಶೇ.85 ರಷ್ಟು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲು ನಿರ್ಧರಿಸಿದ್ದು, ಆಸಕ್ತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಪಂಚಮಸಾಲಿ ಮಹಿಳಾ ಜಿಲ್ಲಾ ಅಧ್ಯಕ್ಷರು, ಸರಳ ಕರಿಬಸಪ್ಪ, 60 ಅಡಿ ರಸ್ತೆ, 2ನೇ ತಿರುವು, ವಿನೋಬನಗರ, ಶಿವಮೊಗ್ಗ ಇಲ್ಲಿಗೆ ಅರ್ಜಿಯೊಂದಿಗೆ ಅಂಕಪಟ್ಟಿ, ಮೊಬೈಲ್ ನಂಬರ್, 2 ಪೋಟೋ ಕಳುಹಿಸಬೇಕು ಎಂದು ಘಟಕ ಅಧ್ಯಕ್ಷೆ ಸರಳ ತಿಳಿಸಿದ್ದಾರೆ. ವಿವರಗಳಿಗಾಗಿ- 9591246331
ಬೆಂಬಲ
ಸಾಗರ: ದಂಡಾವತಿ ಅಣೆಕಟ್ಟು ನಿರ್ಮಾಣ ವಿರೋಧಿ ಹೋರಾಟವನ್ನು ವೃಕ್ಷಲಕ್ಷ ಆಂದೋಲನ ಬೆಂಬಲಿಸುತ್ತದೆ ಎಂದು ಆಂದೋಲನದ ಪ್ರಮುಖ ಹಾಗೂ ಪಶ್ಚಿಮಘಟ್ಟ ಅಭಿವೃದ್ಧಿ ಕಾರ್ಯಪಡೆಯ ನಿಕಟಪೂರ್ವ ಅಧ್ಯಕ್ಷ ಅನಂತ ಹೆಗಡೆ ಅಶಿಸರ ಹೇಳಿದರು. ಸುದ್ದಿಗೋಷ್ಠಿಯಲ್ಲಿ, ದಂಡಾವತಿ ಯೋಜನೆ ಕುರಿತಾದ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಯೋಜನೆ ಇನ್ನೂ ಪ್ರಾಥಮಿಕಕ್ಕಿಂತಲೂ ಪೂರ್ವದ ಹಂತದಲ್ಲಿದೆ ಎನ್ನಬಹುದು. ಯೋಜನೆ ಕುರಿತಂತೆ ಪರಸರ ವರದಿ, ಅರಣ್ಯ ಇಲಾಖೆ ವರದಿ ಹಾಗೂ ಸ್ಥಳೀಯ ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸಿಲ್ಲ. ಪರಿಸರಕ್ಕೆ ಹೆಚ್ಚು ಹಾನಿ ಸಂಭವಿಸುವುದು ದೃಢಪಟ್ಟರೆ ಇನ್ನೊಂದು ಸುತ್ತಿನ ಜನಾಂದೋಲನ ಅಗತ್ಯ ಎಂದರಲ್ಲದೆ ಜನಸಂಘರ್ಷ ಏರ್ಪಡದಂತೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋದಾಗ ಇಂತಹ ಯೋಜನೆ ಯಶಸ್ವಿ ಅನುಷ್ಠಾನ ಸಾಧ್ಯ ಎಂದರು. ಪಶ್ಚಮಘಟ್ಟದ ಮಹತ್ವ ಹೆಚ್ಚಿಸುವ ಹಾಗೂ ವ್ಯಾಪ್ತಿಯನ್ನು ಗುರುತಿಸುವ ನಿಟ್ಟಿನಲ್ಲಿ ಡಾ. ಕಸ್ತೂರಿ ರಂಗನ್ ಕೇಂದ್ರ ಸರ್ಕಾರಕ್ಕೆ ವರದಿ ನೀಡಿದ್ದಾರೆ. ಆದರೆ ಈ ವರದಿಯಲ್ಲಿ ಕೆಲವು ಲೋಪದೋಷಗಳಿದ್ದು ಸರ್ಕಾರ ಇದನ್ನು ಗಮನಿಸಿ ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ವೃಕ್ಷಲಕ್ಷ ಆಂದೋಲನದ ಬಿ.ಎಚ್. ರಾಘವೇಂದ್ರ, ಆನೆಗುಳಿ ಸುಬ್ರಾವ್, ಲಿಂಗಪ್ಪ ಗೌಡ, ನಾಗೇಂದ್ರ ಸಾಗರ್, ಕವಲಕೋಡು ವೆಂಕಟೇಶ್ ಇದ್ದರು.
ನಿದ್ರಾಮಯ್ಯ ಆಗಬೇಡಿ...
ಶಿವಮೊಗ್ಗ: ಸದನದಲ್ಲಿ ಕಲಾಪ ನಡೆಯುತ್ತಿರುವಾಗ ತೂಕಡಿಸುವ ಸಿದ್ದರಾಮಯ್ಯ ಅವರು ನಿದ್ರಾಮಯ್ಯ ಆಗಿದ್ದಾರೆ. ಇದು ಜವಾಬ್ದಾರಿಯುತ ಮುಖ್ಯಮಂತ್ರಿಯ ಲಕ್ಷಣ ಅಲ್ಲ ಎಂದು ರಾಜ್ಯ ಬಿಜೆಪಿ ವಕ್ತಾರ ಆಯನೂರು ಮಂಜುನಾಥ್ ಟೀಕಿಸಿದ್ದಾರೆ.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕಾಂಗ್ರೆಸ್ ಸರ್ಕಾರದ ಪರವಾಗಿ ಮಾತನಾಡುವಾಗಲೂ ಅವರು ನಿದ್ರೆ ಮಾಡುತ್ತಿದ್ದರು. ಪ್ರಮಾಣ ಸ್ವೀಕರಿಸಿದ ಶಾಸಕರು ಅವರ ಬಳಿ ಬಂದಾಗ ಅವರನ್ನು ನಿದ್ದೆಯಿಂದ ಎಬ್ಬಿಸಿ ಮಾತನಾಡುತ್ತಿದ್ದರು ಎಂದ ಅವರು, ಸಿದ್ದರಾಮಯ್ಯ ಅವರು ಮೈ, ಮನಸ್ಸು, ಕಿವಿ, ಕಣ್ಣು ತೆರೆದಿಟ್ಟುಕೊಂಡು ಕೆಲಸ ಮಾಡಲಿ ಎಂದು ಸಲಹೆ ನೀಡಿದ್ದಾರೆ.
ಆಪಘಾತಕ್ಕೆ ಆಹ್ವಾನ ನೀಡುತ್ತಿದೆ ಸೇತುವೆ
ತರೀಕೆರೆ: ಸಮೀಪದ ಬೇಲೇನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆರೆಯ ದೊಡ್ಡ ಸೇತುವೆ ತಡೆಗೋಡೆ ಶಿಥಿಲವಾಗಿದ್ದು, ಅಪಘಾತಕ್ಕೆ ಆಹ್ವಾನ ಕೊಟ್ಟಂತಾಗಿದೆ. ರಾಷ್ಟ್ರೀಯ ಹೆದ್ದಾರಿಯಾದುದರಿಂದ ಸದಾ ಸಂಚಾರ ದಟ್ಟಣೆಯಿಂದ ಕೂಡಿರುತ್ತದೆ. ಅಲ್ಲದೆ ರಸ್ತೆ ವಿಶಾಲವಾಗಿಲ್ಲ.
ಇದರಿಂದ ಸಂಚರಿಸುವ ವಾಹನಗಳು ಬಿದ್ದು ಹೋಗಿರುವ ಸೇತುವೆಯ ತಡೆಗೋಡಯ ಸನಿಹವೇ ಸಂಚಿರಸಬೇಕಾದ ಅನಿವಾರ್ಯತೆ ಇದೆ. ಸೇತುವೆ ಕೆಳಗಡೆ ಸುಮಾರು 40 ಅಡಿ ಅಳದಲ್ಲಿ ದೊಡ್ಡ ಕೆರೆಯೂ ಇದೆ. ಕೂಡಲೇ ಸಂಬಂದ ಪಟ್ಟ ಇಲಾಖೆ ಸೇತುವೆ ತಡೆಗೋಡೆ ನಿರ್ಮೀಸಿ ವಾಹನಗಳ ಸುಗಮ ಸಂಚಾರ ಸುರಕ್ಷತೆಗೆ ಗಮನ ಹರಿಸಬೇಕೆಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.