ನಾಳೆಯಿಂದ ಉಚಿತ ಯೋಗ ಶಿಬಿರ
ಶಿವಮೊಗ್ಗ: ನಗರದ ಎ.ಎನ್.ಕೆ ರಸ್ತೆಯಲ್ಲಿನ ಗುರುಕಣ್ಣಿನ ಆಸ್ಪತ್ರೆಯಲ್ಲಿ ಮಹಿಳೆಯರು ಮತ್ತು ಮಕ್ಕಳಿಗಾಗಿ ಜೂನ್ 13ರಿಂದ 2 ವಾರ ಪ್ರತಿದಿನ ಸಂಜೆ 6ರಿಂದ 7ಗಂಟೆವರೆಗೆ ರಾಜೇಂದ್ರ ನಗರದ ಗುರುಧ್ಯಾನ ಸಭಾಂಗಣದಲ್ಲಿ ಉಚಿತ ಯೋಗ ಶಿಬಿರ ಹಮ್ಮಿಕೊಳ್ಳಲಾಗಿದೆ. ಜೂ.13ರ ಸಂಜೆ 6ಕ್ಕೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಯೋಗ ಶಿಕ್ಷಕ ವೈದ್ಯನಾಥ್ ಶಿಬಿರದಲ್ಲಿ ತರಬೇತಿ ನೀಡುವರು ಎಂದು ಆಸ್ಪತ್ರೆಯ ವೈದ್ಯ ಡಾ.ಎಚ್.ವಿ. ಗಿರಿಸ್ವಾಮಿ ರಸ್ತಾಪುರಮಠ ತಿಳಿಸಿದ್ದಾರೆ. ವಿವರಗಳಿಗಾಗಿ- 08182-270647.
ವಿಶೇಷ ಉಪನ್ಯಾಸ
ಶಿವಮೊಗ್ಗ: ರೋಟರಿ ಕ್ಲಬ್ ಜೂನ್ 12ರಂದು ಸಂಜೆ7.15ಕ್ಕೆ ನಗರದ ಲಾಲ್ ಬಹದ್ದೂರ್ ಶಾಸ್ತ್ರಿ ನಗರದಲ್ಲಿರುವ ರೋಟರಿ ಯುವಕೇಂದ್ರದ ಆವರಣದಲ್ಲಿರುವ ಪವಾಡಗಳ ಅನಾವರಣ ಎಂಬ ವಿಷಯವಾಗಿ ವಿಶೇಷ ಉಪನ್ಯಾಸ ಏರ್ಪಡಿಸಲಾಗಿದೆ. ಪವಾಡ ಸಂಶೋಧನಾ ಕೇಂದ್ರದ ಮುಖ್ಯಸ್ಥ ಹುಲಿಕಲ್ ನಟರಾಜ್ ಪ್ರಾತ್ಯಕ್ಷಿಕೆ ಮೂಲಕ ಮಾತನಾಡಲಿದ್ದಾರೆ ಎಂದು ಕ್ಲಬ್‌ನ ಅಧ್ಯಕ್ಷ ಎನ್.ಎಸ್. ಶ್ರೀಧರ್ ತಿಳಿಸಿದ್ದಾರೆ. ವಿವರಗಳಿಗಾಗಿ- 9480008646.