ದೇವಾಲಯಗಳ ರಕ್ಷಣೆ ಬಿಎಸ್ವೈ ಕನಸು
ಶಿರಾಳಕೊಪ್ಪ: ಐತಿಹಾಸಿಕ ದೇವಾಲಯ ರಕ್ಷಣೆ ಮಾಡಬೇಕೆಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಸಹಕಾರದಿಂದ ಮೂರುವರೆ ಕೋಟಿ ರು. ವೆಚ್ಚದಲ್ಲಿ ದೇವಸ್ಥಾನಗಳ ಜೀಣೋದ್ಧಾರ ಕೈಗೊಳ್ಳಲಾಯಿತು. ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.
ಸಮೀಪದ ಐತಿಹಾಸಿಕ ಸ್ಥಳದಲ್ಲಿ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದ ಪಾಂಡವರ ಕಾಲದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಪಂಚಲಿಂಗಳಲ್ಲಿ ಒಂದಾದ ನೀಲಖಂಠೇಶ್ವರ, ಪಂಚಲೀಂಗೇಶ್ವರ, ಆದಿಶೇಷ ಹಾಗೂ ಕಲ್ಲಪ್ಪದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿ, ತಾಲೂಕಿನಲ್ಲಿ ಮತ್ತು ರಾಜ್ಯದಲ್ಲಿ ಹಲವಾರು ದೇವಸ್ಥಾನಗಳ ನಿರ್ಮಾಣ ಹಾಗೂ ಜಿರ್ಣೋದ್ಧಾರಗಳನ್ನು ಯಡಿಯೂರಪ್ಪನವರು ಮುಖ್ಯ ಮಂತ್ರಿ ಆದಾಗ ಕೈಗೊಳ್ಳ ಲಾಯಿತು ಎಂದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಕೋಣಂದೂರು ಬ್ರಹನ್ಮಠದ ಶಿವಲಿಂಗೇಶ್ವರ ಸ್ವಾಮಿ ಮಾತನಾಡಿ, ಭಕ್ತರ ಬಾಳು ಹಸನವಾಗಬೇಕು ಎಂಬುದು ಧರ್ಮದ ಉದ್ದೇಶ, ಧರ್ಮಕಾರ್ಯಗಳನ್ನು ನಾವು ಕೈಗೊಂಡಾಗ ಬಕ್ತರಿಗೆ ಒಳ್ಳೆಯದಾಗುತ್ತದೆ ಎಂದರು. ಬಳ್ಳಿಗಾವಿಯಂತಹ ಐತಿಹಾಸಿಕ ಕ್ಷೇತ್ರದಲ್ಲಿ ಐತಿಹಾಸಿಕ ಪರಂಪರೆಯನ್ನು ಉಳಿಸಿ ಬೆಳಸಿಕೊಂಡು ಹೋಗುವ ಕಾರ್ಯವನ್ನು ಈ ಭಾಗದ ಭಕ್ತರು ಮುಂದುವರೆಸಿಕೊಂಡು ಹೋಗಬೇಕು ಎಂದರು. ಕಣಸೋಗಿ ಹೊಂಡದ ಮಠದ ಶಿವಾನಂದ ಶಿವಾಚಾರ್ಯ ಸ್ವಾಮಿಗಳು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಣ್ಣ ಹನುಮಂತಪ್ಪ, ಮಲ್ಲಣ್ಣ, ಶಿವಾನಂದಸ್ವಾಮಿ,ನಾಗರಾಜ್, ಚಂದ್ರಶೇಖರ, ಶಿವಣ್ಣ ಇದ್ದರು.