ರಾಜ್ಯಮಟ್ಟದ ಪ್ರೇಮ ಕವನಗಳ ಸ್ಪರ್ಧೆ
ಶಿವಮೊಗ್ಗ: ಗ್ರಾಮಾಂತರ ಬುದ್ಧಿ ಜೀವಿಗಳ ಬಳಗವು ಪ್ರೇಮಕವಿ ಕೆ.ಎಸ್. ನರಸಿಂಹಸ್ವಾಮಿ ಅವರ 98ನೇ ಜನ್ಮ ದಿನ ಹಾಗೂ ಸಂಸ್ಥೆಯ 28ನೇ ವಾರ್ಷಿಕೋತ್ಸವದ ಅಂಗವಾಗಿ ರಾಜ್ಯಮಟ್ಟದ ಪ್ರೇಮ ಕವನಗಳ ಸ್ಪರ್ಧೆ ಏರ್ಪಡಿಸಿದೆ. ಕವನ ಸ್ಪರ್ಧೆಯಲ್ಲಿ ಅತ್ಯುತ್ತಮವೆಂದು ಆಯ್ಕೆಯಾಗಿರುವ ಐವರು ಹೊರನಾಡಿನ ಕವಿಗಳಿಗೆ ಹಾಗೂ 10ಮಂದಿ ಕನ್ನಡ ನಾಡಿನ ಕವಿಗಳು, ಕವಯಿತ್ರಿಯರಿಗೆ ಪ್ರೇಮಕವಿ ಕೆ.ಎಸ್. ನರಸಿಂಹಸ್ವಾಮಿ ಕಾವ್ಯ ಪುರಸ್ಕಾರ ನೀಡಿ ಸನ್ಮಾನಿಸಲಾಗುವುದು. ಆಸಕ್ತ ಕವಿಗಳು ತಮ್ಮ ಎರಡು ಪ್ರೇಮ ಕವನಗಳನ್ನು ತಮ್ಮ ಸ್ವಂತ ವಿಳಾಸ ಬರೆದು ಅಂಚೆ ಕವರ್ಹಾಗೂ ಭಾವಚಿತ್ರದೊಂದಿಗೆ ಜುಲೈ 15ರೊಳಗೆ ತಲುಪುವಂತೆ ಭೇರ್ಯ ರಾಮಕುಮಾರ್ ಅಧ್ಯಕ್ಷರು, ಗ್ರಾಮಾಂತರ ಬುದ್ದಿ ಜೀವಿಗಳ ಬಳಗ, ಶ್ರೀಅರ್ಕೇಶ್ವರ ನಗರ ಬಡಾವಣೆ, ಕೆ.ಆರ್. ನಗರಟೌನ್, ಮೈಸೂರು ಜಿಲ್ಲೆ, 571602 ಅಥವಾ ಝಿಜ್ಠಣಛ್ಠಛಟಛ್ಞ್ಡಟಛ್ಠಣ್ಜಟಛ್ಝಟ.್ಛ್ಟಟ ಇಲ್ಲಿಗೆ ಕಳುಹಿಸಬಹುದು ಎಂದು ಬಳಗದ ಮಹಿಳಾ ಸಂಚಾಲಕಿ ಎಚ್.ಎನ್. ಸವಿತಾ ತಿಳಿಸಿದ್ದಾರೆ. ವಿವರಗಳಿಗಾಗಿ- 9449680583.