ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಬಾಲಕಾರ್ಮಿಕ ವಿರೋಧಿ ದಿನಾಚರಣೆ

Lingaraj Badiger
Updated On : 14 Jun 2013, 10:40 am

ಕ.ಪ್ರ.ವಾರ್ತೆ, ಸೊರಬ,  ಜೂ.13
ಬಾಲ ಕಾರ್ಮಿಕ ಕಾಯ್ದೆ ಅನ್ವಯ 14 ವರ್ಷದೊಳಗಿನ ಮಕ್ಕಳನ್ನು ಯಾವುದೇ ಕಾರಣಕ್ಕೂ ಕೆಲಸಕ್ಕೆ ತೊಡಗಿಸಿಕೊಳ್ಳುವಂತಿಲ್ಲ. ಅಂತಹ ಪ್ರಕರಣ ಕಂಡುಬಂದಲ್ಲಿ ಇಲಾಖೆ ಗಮನಕ್ಕೆ ತರುವಂತೆ ಹಿರಿಯ ನ್ಯಾಯಾಧೀಶರಾದ ಕೆ. ಶೋಭಾವತಿ ತಿಳಿಸಿದರು.
ಪಟ್ಟಣ ಅಂಬೇಡ್ಕರ್ ಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಾರ್ಮಿಕ ಇಲಾಖೆ ಹಾಗೂ ಪಪಂ ಇವರ ಸಂಯುಕ ಆಶ್ರಯದಲ್ಲಿ ನಡೆದ ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಸರ್ಕಾರಿ ಅಭಿಯೋಜಕ ಎಂ.ಡಿ. ಮಾಂಗ್ಲಿ ಮಾತನಾಡಿ, ಕಾನೂನು ತಿಳಿವಳಿಕೆ ಇಲ್ಲ ಎಂದ ಮಾತ್ರಕ್ಕೆ ಯಾರನ್ನೂ ಮನ್ನಿಸಲು ಬರುವುದಿಲ್ಲ. ಈ ನಿಟ್ಟಿನಲ್ಲಿ ಕಾನೂನು ಸೇವಾ ಸಮಿತಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕಾನೂನು ಅರಿವು ಕಾರ್ಯಾಗಾರ ನಡೆಸುಕೊಂಡು ಬರುತ್ತಿದ್ದು, ಬಾಲ ಕಾರ್ಮಿಕರನ್ನು ಗುರುತಿಸಲು ಸಾರ್ವಜನಿಕರ ಸಹಕಾರ ಅಗತ್ಯ ಎಂದರು.
ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ ಕಾರ್ಯಕ್ರಮಕ್ಕೆ ತಾಲೂಕಿನ ಉನ್ನತಾಧಿಕಾರಿಗಳು ಹಾಜರಾಗಿದ್ದರೂ, ಕಾರ್ಮಿಕ ಇಲಾಖೆ ಅಧಿಕಾರಿಗಳು ಪಾಲ್ಗೊಳ್ಳದಿರುವುದು, ಈ ಬಗ್ಗೆ ಉಪಸ್ಥಿತರಿದ್ದ ಅಧಿಕಾರಿಗಳು ಚಕಾರ ಎತ್ತದೆ ಇದ್ದುದು ಗಮನಾರ್ಹವಾಗಿತ್ತು. ವಕೀಲರ ಸಂಘದ ಅಧ್ಯಕ್ಷ ಸಿ.ಎಸ್. ರುದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಅಬಕಾರಿ ಇಲಾಖೆ ನಿರೀಕ್ಷಕರಾದ ಮಮತಾ, ಪಿಎಸ್‌ಐ ಮಹಬಲೇಶ್ವರ ನಾಯ್ಕ್, ನ್ಯಾಯವಾದಿ ಎಚ್.ಎಸ್. ಚಂದ್ರಶೇಖರ್, ರಾಮಪ್ಪ, ವಿವಿಧ ಇಲಾಖೆಯವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement