ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಅಧಿಕ ಶುಲ್ಕ ವಸೂಲಿ ತಡೆಗೆ ಆಗ್ರಹ

Lingaraj Badiger
Updated On : 15 Jun 2013, 10:47 am

ಸೊರಬ: ಆನವಟ್ಟಿಯಲ್ಲಿರುವ ಸರ್ಕಾರಿ ಮತ್ತು ಸರ್ಕಾರೇತರ ಅನುದಾನಿತ ಶಾಲೆಗಳಲ್ಲಿ ಸರ್ಕಾರ ನಿಗಧಿಪಡಿಸಿದ ಶುಲ್ಕಕ್ಕಿಂತ ಅಧಿಕ ಶುಲ್ಕವನ್ನು ಪಡೆಯಲಾಗುತ್ತಿದೆ ಎಂದು ನಾಗರಿಕ ಹಿತರಕ್ಷಣಾ ವೇದಿಕೆ ಆರೋಪಿಸಿದೆ.
ಹೆಚ್ಚೂವರಿ ಶುಲ್ಕ ಪಡೆದಿದ್ದಕ್ಕೆ ರಸೀತಿ ಕೊಡಲು ನಿರಾಕರಿಸುತ್ತಿರುವ ಸಂಸ್ಥೆ ವ್ಯವಸ್ಥಿತವಾಗಿ ಶೋಷಣೆಗಿಳಿದಿದೆ. ಹೀಗೆ ನಿಗಧಿಗೊಳಿಸಿದ್ದಕ್ಕಿಂತ ಹೆಚ್ಚು ಶುಲ್ಕವನ್ನು ಭರಿಸಲಾರದ ಅನೇಕ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುವಂತಾಗಿದೆ. ಕೂಡಲೇ ಈ ನೂತನ ಪದ್ಧತಿ ಅಳವಡಿಸಿಕೊಂಡಿರುವ ಶಿಕ್ಷಣ ಸಂಸ್ಥೆಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಖುದ್ದು ಪರಿಶೀಲಿಸಿ, ಪರಾಮರ್ಶಿಸಿ ಮಕ್ಕಳಿಗೆ ನ್ಯಾಯ ಒದಗಿಸಿಕೊಡಬೇಕು. ಇಲ್ಲದಿದ್ದರೆ ನಾವು ವೇದಿಕೆ ವತಿಯಿಂದ ಉಗ್ರ ಹೋರಾಟಕ್ಕಿಳಿಯುವುದು ಅನಿವಾರ್ಯವಾಗುತ್ತದೆ ಎಂದು ವೇದಿಕೆ ಎಚ್ಚರಿಸಿದೆ.
ವೇದಿಕೆಯ ಉಮೇಶ್ ಉಡುಗಣಿ, ವಕೀಲರಾದ ಉಮೇಶ್, ಮಹೇಶ್, ಮಣಿಕಂಠ, ಕೃಷ್ಣಮೂರ್ತಿ, ಮಂಜುನಾಥ್, ವಿಶ್ವನಾಥ್, ಬಸವರಾಜ್, ಕಿರಣ್, ವಿಕಾಸ್, ರಮೇಶ್ ಮೊದಲಾದವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement