ಅರ್ಜಿ ಆಹ್ವಾನ
ಶಿವಮೊಗ್ಗ: ವಾರ್ತಾ ಇಲಾಖೆಯು ಪ್ರಸಕ್ತ ಸಾಲಿನಲ್ಲಿ ಜಿಲ್ಲಾ ಕಚೇರಿಗಳ ಮೂಲಕ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಮೂಲಕ ಅನುಷ್ಠಾನಕ್ಕೆ ತರುವ ಹಲವು ಯೋಜನೆಗಳ ಕುರಿತು ಬೀದಿ ನಾಟಕ ಮತ್ತು ಜಾನಪದ ಸಂಗೀತದ ಮೂಲಕ ಜನಜಾಗೃತಿಗೊಳಿಸಲು ಉದ್ಧೇಶಿಸಿದ್ದು, ಗ್ರಾಮ ಸಂಪರ್ಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಹಾಗೂ ತರಬೇತಿ ಪಡೆಯಲಿಚ್ಚಿಸುವ ಅರ್ಹ ಕಲಾವಿದರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕಲಾ ತಂಡದಲ್ಲಿ 10 ಜನ ನುರಿತ ಕಲಾವಿದರಿದ್ದು, ಸಂಗೀತ ಮತ್ತು ನಾಟಕ ಕಾರ್ಯಕ್ರಮಗಳನ್ನು ನಡೆಸಿಕೊಡಲು ಸಿದ್ಧರಿರಬೇಕು. ಪ್ರತಿ ತಂಡದಲ್ಲಿ 2 ಮಹಿಳೆಯರು ಕಡ್ಡಾಯ. ಆಯ್ಕೆಯಾದ 2 ತಂಡಗಳಿಗೆ ಇಲಾಖೆಯಿಂದ ತರಬೇತಿ ನೀಡಲಾಗುವುದು. ತರಬೇತಿ ಪಡೆದ ಕಲಾವಿದರನ್ನೇ ಕಾರ್ಯಕ್ರಮಗಳಲ್ಲಿ ಬಳಸಿಕೊಳ್ಳಲಾಗುವುದು. ಆಸಕ್ತ ಕಲಾವಿದರು, ಕಲಾ ತಂಡಗಳ ಮುಖ್ಯಸ್ಥರು ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರ ಕಚೇರಿಯಿಂದ ನಿಗಧಿತ ನಮೂನೆಯ ಅರ್ಜಿಯನ್ನು ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ವಿವರಗಳೊಂದಿಗೆ ಜೂನ್ 22ರೊಳಗಾಗಿ ಸಲ್ಲಿಸಬಹುದಾಗಿದೆ. ವಿವರಗಳಿದೂ.08182-278638, ಮೊ- 9449322102 ಸಂಪರ್ಕಿಸಬಹುದು.
ಎಸ್ಬಿಎಂ ಶಾಖೆ ಉದ್ಘಾಟನೆ
ಶಿವಮೊಗ್ಗ: ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಕಳೆದ 35 ವರ್ಷಗಳಿಂದ ಕುವೆಂಪು ವಿಶ್ವ ವಿದ್ಯಾನಿಲಯದೊಂದಿಗೆ ಉತ್ತಮ ಸಂಬಂಧವೊಂದಿದ್ದು, ಎಲ್ಲಾ ವರ್ಗದ ಜನರಿಗೆ ಅತ್ಯುತ್ತಮ ಸೇವೆ ನೀಡುತ್ತಿದೆ ಎಂದು ಕುವೆಂಪು ವಿವಿ ಕುಲಪತಿ ಪ್ರೊ. ಎಸ್.ಎ. ಬಾರಿ ಹೇಳಿದರು.
ನಗರದ ವಿದ್ಯಾನಗರ ಬಡಾವಣೆಯಲ್ಲಿ ಗುರುವಾರ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ನೂತನ ಶಾಖೆಯನ್ನು ಉದ್ಘಾಟಿಸಿ ಅವರು, ಸ್ಟೇಟ್ ಬ್ಯಾಂಕ್ ತನ್ನ ಮೊದಲ ಶಾಖೆಯನ್ನು 1913ರಲ್ಲಿ ಆರಂಭಿಸಿ, ಇಲ್ಲಿಯವರೆಗೆ ಉತ್ತಮ ಸೇವೆ ನೀಡುತ್ತ ಬಂದಿದೆ. ಈ ನಿಟ್ಟಿನಲ್ಲಿ ಬ್ಯಾಂಕ್ ತನ್ನ ಶಾಖೆಗಳನ್ನು ಹೆಚ್ಚಿಸಿಕೊಳ್ಳುತ್ತಿದ್ದು. ಇಂದು ಹೊಸ ಶಾಖೆಯನ್ನು ತೆರೆಯುವ ಮೂಲಕ ರಾಜ್ಯದಲ್ಲಿ ತನ್ನ 783 ಶಾಖೆಗಳನ್ನು ತೆರಿದಿದೆ ಎಂದರು.
ಸ್ಥಳೀಯ ಗ್ರಾಹಕರ ಅನುಕೂಲಕ್ಕಾಗಿ ಬ್ಯಾಂಕ್ ಮತ್ತಷ್ಟು ಶಾಖೆಗಳನ್ನು ತೆರೆದು ತನ್ನ 100ನೇ ಶಾಖೆಯನ್ನು ಪೂರ್ಣಗೊಳಿಸಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಕುವೆಂಪು ವಿವಿಯ ಕುಲಸಚಿವ ಬೋಜಾನಾಯ್ಕ್, ಪ್ರಾದೇಶಿಕ ಕಚೇರಿಯ ಸಹಾಯಕ ಪ್ರಧಾನ ವ್ಯವಸ್ಥಾಪಕ ದಿನೇಶ್ ಎ. ಪಾಟೀಲ್, ಪ್ರಧಾನ ವ್ಯವಸ್ಥಾಪಕ ಎಸ್. ಬಂಗಾರರಾಜು, ವಿದ್ಯಾನಗರ ಶಾಖೆಯ ವ್ಯವಸ್ಥಾಪಕ ಎಚ್.ಜೆ. ಸುರೇಶ್, ಎಚ್.ಎಸ್. ಹಿರಣ್ಣಯ್ಯ ಮತ್ತಿತರರು ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.