ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಎಸ್ಸೆಫ್‌ಎಲ್‌ಎ ನಿಯೋಗದಿಂದ ಸ್ಪೀಕರ್ ಭೇಟಿ

Lingaraj Badiger
Updated On : 15 Jun 2013, 10:48 am

ಕ.ಪ್ರ.ವಾರ್ತೆ, ಭದ್ರಾವತಿ, ಜೂ.14
ಶಾಸಕ ಎಂ.ಜೆ. ಅಪ್ಪಾಜಿ ಅವರ ನೇತೃತ್ವದಲ್ಲಿ ಎಂ.ಪಿ.ಎಂ ಉದ್ಯೋಗಿಗಳ ಸಂಘದ (ಎಂ.ಪಿ.ಎಂ ಇ.ಎ) ಹಾಗೂ ಎಂ.ಪಿ.ಎಂ ಶುಗರ್ ಫ್ಯಾಕ್ಟರಿ ಲೇಬರ್ಸ್ ಅಸೋಸಿಯೇಶನ್ (ಎಸ್‌ಎಫ್‌ಎಲ್‌ಎ) ಪದಾಧಿಕಾರಿಗಳು ಶುಕ್ರವಾರ ಬೆಂಗಳೂರಿನಲ್ಲಿ ವಿಧಾನಸಭೆಯ ಸಭಾಪತಿ ಕಾಗೋಡು ತಿಮ್ಮಪ್ಪ ಅವರನ್ನು ಭೇಟಿ ಮಾಡಿದರು.
ಭೇಟಿ ವೇಳೆ ಮೈಸೂರು ಕಾಗದ ಕಾರ್ಖಾನೆಯ ಅಭಿವೃದ್ಧಿ ಮತ್ತು ಪುನಶ್ಚೇತನಗೊಳಿಸುವ ಬಗ್ಗೆ ಮತ್ತು ಕಾರ್ಮಿಕರಿಗೆ ಕೊಡಬೇಕಾಗಿರುವ ತುಟ್ಟಿ ಭತ್ಯೆಯ ಬಾಕಿಯ ಹಣದ ಬಗ್ಗೆ ಮನವಿ ಪತ್ರವನ್ನು ಸಲ್ಲಿಸಿತು ಎಂದು ಎಂ.ಪಿ.ಎಂ ಉದ್ಯೋಗಿಗಳ ಸಂಘದ ಅಧ್ಯಕ್ಷ ಎಸ್. ಚಂದ್ರಶೇಖರ್ ತಿಳಿಸಿದ್ದಾರೆ.
ಈ ಹಿಂದೆ ರಾಜ್ಯ ಸರ್ಕಾರ ಎಂ.ಪಿ.ಎಂ ಕಾರ್ಖಾನೆಯ ಪುನಶ್ಚೇತನದ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ನೇಮಿಸಿದ್ದ ಡಲಾಯಟ್ ಕಂಪನಿಯ ವರದಿಯನ್ನು ಸಹ ಮನವಿಪತ್ರದೊಂದಿಗೆ ಅರ್ಪಿಸಲಾಯಿತು ಎಂದು ಚಂದ್ರಶೇಖರ್ ತಿಳಿಸಿದ್ದಾರೆ.
ಎರಡೂ ಸಂಘಗಳ ಪದಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವರೂ ಅದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹಾಗೂ ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ ಅವರುಗಳನ್ನೂ ಭೇಟಿ ಮಾಡಿ ಎಂ.ಪಿ.ಎಂ ಪುನಶ್ಚೇತನ ಮತ್ತು ತುಟ್ಟಿಭತ್ಯೆ ಪಾವತಿಯ ಬಗ್ಗೆ ಮಾತುಕತೆ ನಡೆಸಿದರು.
ಭರವಸೆ: ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ್ ಹಾಗೂ ಸಿ.ಎಂ. ಇಬ್ರಾಹಿಂ ಅವರುಗಳು ಪ್ರಸ್ತುತ ಸರ್ಕಾರದ ಅವಧಿಯಲ್ಲಿ ಮೈಸೂರು ಕಾಗದ ಕಾರ್ಖಾನೆಯನ್ನು ಅಭಿವೃದ್ಧಿ ಪಡಿಸುವದರೊಂದಿಗೆ ಅದಕ್ಕೆ ಪುನಶ್ಚೇತನ ನೀಡುತ್ತೇವೆಂಬ ಭರವಸೆಯನ್ನು ನೀಡಿದ್ದಾರೆಂದು ಸಹ ಚಂದ್ರಶೇಖರ್ ತಿಳಿಸಿದ್ದಾರೆ.ತಮ್ಮೊಂದಿಗೆ ಎಂಪಿಎಂಇಎ ಸಹಕಾರ್ಯದರ್ಶಿ ಪರಮಶಿವ ಹಾಗೂ ಖಜಾಂಚಿ ಮಂಜುನಾಥ್ ಮತ್ತು ಎಸ್‌ಎಫ್‌ಎಲ್‌ಎ ಅಧ್ಯಕ್ಷ ಪ್ರಕಾಶ್ ರಾವ್ ಹಾಗೂ ಪದಾಧಿಕಾರಿಗಳಾದ ರುದ್ರಪ್ಪ, ಕೃಷ್ಣಮೂರ್ತಿ, ಪ್ರಭಾಕರ್ ಇದ್ದರೆಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement