ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ

Lingaraj Badiger
Updated On : 15 Jun 2013, 10:41 am

ಶಿವಮೊಗ್ಗ: ಗ್ರಾಮ ಪಂಚಾಯಿತಿ ನೌಕರರ ಬೇಡಿಕೆಗಳನ್ನು ಈಡೇರುಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ ಜೂ.17ರಂದು ಬೆಳಿಗ್ಗೆ 12 ಗಂಟೆಗೆ ನಗರದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ. ನಗರದ ಗೋಪಿ ವೃತ್ತದಲ್ಲಿರುವ ಅಂಚೆ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದು, ಪ್ರತಿಭಟನೆಯಲ್ಲಿ ಜಿಲ್ಲೆಯಲ್ಲಿರುವ ಎಲ್ಲಾ ಗ್ರಾಮ ಪಂಚಾಯಿತಿ ಮತ್ತು ಎಲ್ಲಾ ವರ್ಗದ ಕಾರ್ಮಿಕರು ಪಾಲ್ಗೊಳ್ಳಬೇಕು ಎಂದು ಸಂಘ ತಿಳಿಸಿದೆ. ಸರ್ಕಾರವೇ ನಿಗದಿ ಪಡಿಸಿದ ಕನಿಷ್ಟ ಕೂಲಿ ಜಾರಿ ಮಾಡುವುದು, ಎಸ್‌ಎಸ್‌ಎಲ್‌ಸಿ ಪಾಸಾದ ಪಂಚಾಯಿತಿ ಸಿಬ್ಬಂದಿಯಿಂದ ಕರ ವಸೂಲಿಗಾರ ಹುದ್ದೆಗೆ ಬಡ್ತಿ ನೀಡುವುದು, ಟೈಪಿಸ್ಟ್ ಹುದ್ದೆಯ ಬದಲು ಗಣಕಯಂತ್ರ ಸಹಾಯಕ ಹುದ್ದೆಯ ಬದಲಾವಣೆ ಮಾಡುವುದು, ಸೇವಾ ನಿಯಮಾವಳಿ, ಪೆನ್ಷನ್ ಹಾಗೂ ಖಾಯಂ ಮಾಡಿಕೊಳ್ಳುವುದು ಸೇರಿದಂತೆ ಎಲ್ಲಾ ವರ್ಗದ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ಸಂಘ ಒತ್ತಾಯಿಸಲಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಕುಮಾರ್ ತಿಳಿಸಿದ್ದಾರೆ.
ಜೆಡಿಎಸ್ ಸಂಘಟನಾ ಕಾರ್ಯದರ್ಶಿ ಆಯ್ಕೆ
ಶಿವಮೊಗ್ಗ: ಜೆಡಿಎಸ್ ಸೇವಾದಳದ ವಿಭಾಗಕ್ಕೆ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಸಿಗಬತುಲ್ಲಾ ಅವರನ್ನು ನೇಮಕ ಮಾಡಲಾಗಿದೆ ಎಂದು ಸೇವಾದಳದ ವಿಭಾಗದ ಅಧ್ಯಕ್ಷ ಬಿ.ಎನ್. ಬಸವರಾಜ ಪಾದಯಾತ್ರಿ ತಿಳಿಸಿದ್ದಾರೆ.
ಆಯ್ಕೆ ಮಾಡದ ಸಹಕಾರ ಸಂಘ
ಮೂಡಿಗೆರೆ: ತಾಲೂಕಿನ ದಾರದಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಕರೆದು, ಪ್ರತಿ ಅರ್ಜಿಗೆ 200 ರು.ಗಳಂತೆ ಸಾವಿರಾರು ಅಭ್ಯರ್ಥಿಗಳಿಂದ ಲಕ್ಷಾಂತರ ರು. ಸಂಗ್ರಹಿಸಿ, ಸಂದರ್ಶನವಾಗಲೀ ಆಯ್ಕೆ ಪ್ರಕ್ರಿಯೆಗಾಗಲಿ ನಡೆಸದೆ ವಂಚಿಸಲಾಗಿದೆ ಎಂದು ಅಭ್ಯರ್ಥಿ ಸಂತೋಷ್ ಹುಂಡುಗುಳಿ ದೂರಿದ್ದಾರೆ. ಈ ಕುರಿತು ಹೇಳಿಕೆ ನೀಡಿ, 2012ರ ಜುಲೈ ತಿಂಗಳಲ್ಲಿ ಅಭ್ಯರ್ಥಿಗಳಿಂದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆಗೆ ಅರ್ಜಿಯೊಂದಿಗೆ ತಲಾ 200 ರು.ಗಳ ಶುಲ್ಕ ಪಡೆದು ಹಣವನ್ನು 1 ವರ್ಷ ಕಳೆದರೂ ಅಭ್ಯರ್ಥಿಗಳಿಗೆ ಹಿಂದಿರುಗಿಸದೆ, ಸರ್ಕಾರಕ್ಕೆ ಪಾವತಿ ಮಾಡದೆ ದುರುಪಯೋಗಪಡಿಸಿಕೊಂಡು ವಂಚಿಸಲಾಗಿದೆ ಎಂದು ಆಪಾದಿಸಿದ್ದಾರೆ. ಅಭ್ಯರ್ಥಿಗಳ ಹಣವನ್ನು ಹಿಂದಿರುಗಿಸಬೇಕು ಅಥವಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆಗೆ ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ತಪ್ಪಿದಲ್ಲಿ ಈ ಬಗ್ಗೆ ಲೋಕಾಯುಕ್ತರಿಗೆ ದೂರು ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಅವಿಷ್ಕಾರದಿಂದ ಪರಿಸರ ನಾಶ
ಚಿಕ್ಕಮಗಳೂರು: ಆಧುನಿಕ ಜಗತ್ತಿನಲ್ಲಿ ತಾಂತ್ರಿಕಕತೆಯ ಅವಿಷ್ಕಾರ ಪರಿಸರ ನಾಶಕ್ಕೆ ಕಾರಣವಾಗಿದೆ ಎಂದು ಜಿಲ್ಲಾ ವಿಜ್ಞಾನ ಕೇಂದ್ರದ ಗೌರವಾಧ್ಯಕ್ಷ ಎ.ಎನ್. ಮಹೇಶ್ ಹೇಳಿದ್ದಾರೆ.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಡಾ. ಬಿ.ಆರ್. ಅಂಬೇಡ್ಕರ್ ಪ್ರೌಢಶಾಲೆ, ನಿಸರ್ಗ ಇಕೋ ಕ್ಲಬ್‌ನ ಸಂಯುಕ್ತಾಶಯದಲ್ಲಿ ಪರಿಸರ ಜಾಗೃತಿ ಆಂದೋಲನ ಕಾರ್ಯಕ್ರಮದಲ್ಲಿ ಜೀವಿ ವೈವಿಧ್ಯ ಸಂರಕ್ಷಣೆ ಎಂಬ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾವು ಆಹಾರವು ಹಾಳು ಮಾಡದೆ ಯೋಚಿಸಿ, ಬಳಸಿ ಉಳಿಸುವ ಮೂಲಕ ಪರಿಸರ ಮಾಲಿನ್ಯ ಕಡಿಮೆ ಮಾಡುವಂತೆ ಕಾರ್ಯಕ್ಕೆ ಮುಂದಾಗಬೇಕೆಂದು ಕರೆ ನೀಡಿದರು. ಇಂದು ಕಾಡುಗಳು ನಾಶವಾಗುತ್ತಿವೆ. ನೀರು, ಗಾಳಿ ಕಲುಷಿತಗೊಳ್ಳುತ್ತಿದೆ ಇವುಗಳನ್ನು ಉಳಿಸಿ ಬೆಳೆಸುವಂತೆ ಕಾರ್ಯಕ್ರಮಗಳು ರೂಪುಗೊಳ್ಳಬೇಕು ಎಂದು ಜಿಲ್ಲಾ ವಿಜ್ಞಾನ ಕೇಂದ್ರದ ಸಂಚಾಲಕ ಕೆ.ಜಿ. ನೀಲಕಂಠಪ್ಪ ಹೇಳಿದ್ದಾರೆ. ಶಿಕ್ಷಕ ಎಚ್.ಎಂ. ನೀಲಕಂಠಪ್ಪ,  ಕೆ.ಟಿ. ರಾಧಾಕೃಷ್ಣ, ಪಿ. ವೇಲಾಯುದನ್, ಆರ್.ಎಂ. ಉಮಾಮಹೇಶ್ವರಪ್ಪ, ನಗರಸಭಾ ಸದಸ್ಯ ಸಿ.ಕೆ. ಜಗದೀಶ್ ಮಾತನಾಡಿದ್ದರು. ಆಂಬೇಡ್ಕರ್ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಬಸವರಾಜ್ ಅವರು ಅಧ್ಯಕ್ಷತೆವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement