ವೇಣುಗೋಪಾಲ ರಾವ್ಗೆ ಪ್ರಶಸ್ತಿ ಪ್ರದಾನ
ಕ.ಪ್ರ.ವಾರ್ತೆ ಶಿವಮೊಗ್ಗ ಜೂ.15 ಕರ್ನಾಟಕ ಸಂಘ ಪ್ರತಿ ವರ್ಷ ಕೊಡಮಾಡುವ ಪ್ರೊ. ತೀ.ನಂ.ಶ್ರೀ ಸಾಹಿತ್ಯ ವಿಮರ್ಶೆ ಪ್ರಶಸ್ತಿಯನ್ನು ಹಿರಿಯ ಸಾಹಿತಿ ಮತ್ತು ವಿಮರ್ಶಕ ಡಾ ಎ.ಎಸ್. ವೇಣುಗೋಪಾಲರಾವ್ ಅವರಿಗೆ ಶನಿವಾರ ನಗರದ ಕರ್ನಾಟಕ ಸಂಘದಲ್ಲಿ ಪ್ರದಾನ ಮಾಡಲಾಯಿತು. ನಂತರ ಮಾತನಾಡಿದ ಅವರು, ಪ್ರಶಸ್ತಿಯು ಸಾಹಿತ್ಯದಲ್ಲಿ ನನ್ನನ್ನು ಈ ಪ್ರಶಸ್ತಿ ಇನ್ನಷ್ಟು ಸಕ್ರಿಯವಾಗುವಂತೆ ಮಾಡಿದೆ. ಬದುಕಿನ ಪುನಶ್ಚೇತನಕ್ಕೆ ದಾರಿ ಮಾಡಿದೆ ಎಂದರು.
ಕೊಡುಗೆ ಅನನ್ಯ: ಅಭಿನಂದನಾ ಭಾಷಣ ಮಾಡಿದ ಕುವೆಂಪು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ಬಸವರಾಜ ನೆಲ್ಲಿಸರ, ಡಾ. ಎ.ಎಸ್. ವೇಣುಗೋಪಾಲರಾವ್ ಅವರು ಸಾಹಿತ್ಯದ ಎಲ್ಲಾ ಪ್ರಕಾರಗಳ ಕೊಡುಗೆ ಅನನ್ಯ. ಎಲ್ಲಾ ಭಾಷೆಯ ಪಾಂಡಿತ್ಯ ಹೊಂದಿದ್ದ ರಾವ್ ಅವರ ಬೇಧನಾ ವಿಧಾನ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಾಗಿತ್ತು ಎಂದರು.
ಇದೇ ವೇಳೆ ಡಾ. ಎ.ಎಸ್. ವೇಣುಗೋಪಾಲರಾವ್ ಅವರಿಗೆ ಸಾಹಿತ್ಯಾಸಕ್ತರು ಬರೆದಿದ್ದ ಅಭಿನಂದನಾ ಪತ್ರಗಳನ್ನು ಓದಲಾಯಿತು.
ಕರ್ನಾಟಕ ಸಂಘದ ನಿಕಟಪೂರ್ವ ಅಧ್ಯಕ್ಷ ಡಾ. ತೀ.ನಂ. ಶಂಕರನಾರಾಯಣ, ಹಾಲಿ ಅಧ್ಯಕ್ಷ ಎಸ್.ವಿ. ತಿಮ್ಮಯ್ಯ, ಕಾರ್ಯದರ್ಶಿ ಎಚ್.ಎಸ್. ನಾಗಭೂಷಣ್ಮೊದಲಾದವರು ಇದ್ದರು.