ವೇತನ ಸಮಸ್ಯೆ ಬಗೆಹರಿಸಲು ಒತ್ತಾಯ
ಶಿವಮೊಗ್ಗ: ಶಿವಮೊಗ್ಗ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪ್ರತಿ ತಿಂಗಳು ವೇತನ ವಿಳಂಬವಾಗುತ್ತಿದ್ದು, ಇಸಿಎಸ್ ಸೌಲಭ್ಯದಿಂದ ಮುಕ್ತಗೊಳಿಸಿ ಶೀಘ್ರವೇ ವೇತನವಾಗುವಂತೆ ಕ್ರಮಕೈಗೊಳ್ಳಬೇಕೆಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಶಾಖೆ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರನ್ನು ಒತ್ತಾಯಿಸಿದೆ.
ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಚಿವರನ್ನು ಭೇಟಿಯಾದ ಶಿಕ್ಷಕ ಸಂಘಟನೆ ಪದಾಧಿಕಾರಿಗಳು, ಶಿಕ್ಷಕ ವೃಂದಕ್ಕಾಗುತ್ತಿರುವ ಸಮಸ್ಯೆಯನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರು.
ತಾಲೂಕಿನಲ್ಲಿ ಸುಮಾರು 1500 ಪ್ರಾಥಮಿಕ ಶಾಲಾ ಶಿಕ್ಷಕರು ಕರ್ತವ್ಯನಿರ್ವಹಿಸುತ್ತಿದ್ದಾರೆ. ಸರ್ಕಾರದ ಆದೇಶದನ್ವಯ ಶಿಕ್ಷಕರಿಗೆ ಪ್ರತಿ ತಿಂಗಳ 1ನೇ ತಾರೀಖಿನಂದು ವೇತನ ಪಾವತಿ ಮಾಡುವಂತೆ ಸೂಚನೆ ಇದ್ದರೂ ಅದು ಪಾಲನೆಯಾಗುತ್ತಿಲ್ಲ.
ಶಿವಮೊಗ್ಗ ತಾಲೂಕು ಜಿಲ್ಲಾ ಕೇಂದ್ರದಲ್ಲಿರುವುದರಿಂದ ಇಸಿಎಸ್ ಜಾರಿಯಲ್ಲಿರುವುದರಿಂದ ನಿಯಮಾನುಸಾರ ಸಿಇಎಸ್ ಮಾಡಲು 100 ಬಿಲ್ಲುಗಳು ಅವಶ್ಯಕವಾಗಿರುತ್ತದೆ. 100 ಬಿಲ್ಲುಗಳು ಸಂಗ್ರಹವಾದ ನಂತರ ಸಿಇಎಸ್ ಆದ ಮೇಲೆ ಬ್ಯಾಂಕ್‌ನಲ್ಲಿರುವ ಶಿಕ್ಷಕರ ಖಾತೆಗೆ ಜಮಾ ಮಾಡಲು 3-4 ದಿನ ತಡವಾಗುತ್ತದೆ.
10-15 ದಿನ ತಡ: ಈ ವ್ಯವಸ್ಥೆ 2012ರ ಏಪ್ರಿಲ್‌ನಿಂದ ಜಾರಿಯಲ್ಲಿದ್ದು, ಖಜಾನೆಯ ವಿಳಂಬದಿಂದಾಗಿ ಶಿಕ್ಷಕರಿಗೆ ಪ್ರತಿ ತಿಂಗಳು 10ರಿಂದ 15 ದಿನ ತಡವಾಗಿ ವೇತವಾಗುತ್ತಿದೆ. ಶಿಕ್ಷಕರಿಗೆ ವೇತನ ವಿಳಂಬದಿಂದ ಸಾಕಷ್ಟು ಅನಾನುಕೂಲವಾಗುತ್ತಿದೆ. ಹೀಗಾಗಿ ಸಿಇಎಸ್ ಪದ್ಧತಿಯನ್ನು ರದ್ದುಗೊಳಿಸಿ ಅಥವಾ ಮಾರ್ಪಡಿಸಿ ಈ ಹಿಂದಿನ ವ್ಯವಸ್ಥೆಯಂತೆ ಚೆಕ್ ಮೂಲಕ ಖಜಾನೆಯಿಂದ ಬ್ಯಾಂಕ್ ಖಾತೆಗೆ ವೇತನ ಜಮಾ ಆಗುವಂತೆ ವ್ಯವಸ್ಥೆ ಕಲ್ಪಿಸುವಂತೆ ಶಿಕ್ಷಕ ವೃಂದ ಸಚಿವರನ್ನು ಒತ್ತಾಯಿಸಿತು.
ಅಷ್ಟೇ ಅಲ್ಲದೇ ಶಿಕ್ಷಕರ ವೈದ್ಯಕೀಯ ಬಿಲ್ಲುಗಳ ಅನುದಾನ ಬಿಡುಗಡೆಗೊಳಿಸುವಂತೆಯೂ ಕೋರಿತು. ಎಂ.ಎಸ್. ಪ್ರಸಾದ್ ಬಾಬು, ಅಧ್ಯಕ್ಷ ಬಿ.ಈ. ಮಂಜಾನಾಯ್ಕ ಇದ್ದರು.
ಅರ್ಜಿ ಆಹ್ವಾನ
ಶಿವಮೊಗ್ಗ: ಭದ್ರಾವತಿ ಬೊಮ್ಮನಕಟ್ಟೆಯ ಸರ್.ಎಂ.ವಿ. ಸರ್ಕಾರಿ ವಿಜ್‌ಞಾನ ಕಾಲೇಜಿನಲ್ಲಿ ಪ್ರಸಕ್ತ ಸಾಲಿನಲ್ಲಿ ಪ್ರಥಮ ಬಿ.ಎಸ್ಸಿ, ಬಿ.ಸಿ.ಎ, ಪದವಿ ಪ್ರವೇಶಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಅಭ್ಯರ್ಥಿಗಳು ಕಿಈಂ, ಕಿಂಈಖ, ಈಇಘಿ, ಘಿಈಇಖಿ, ಇಈಂಇ, ಇಈಆ ವಿಷಯಗಳಲ್ಲಿ ಪ್ರತ್ಯೇಕವಾಗಿ ಪ್ರವೇಶ ಪಡೆಯಬಹುದು. ಸುಸಜ್ಜಿತ ಪ್ರಯೋಗಾಲಯ ಹೊಂದಿರುವ ಈ ವಿದ್ಯಾನಿಲಯವು ನ್ಯಾಕ್‌ನಿಂದ ನೀಡಲಾಗುವ ಬಿ ಶ್ರೇಣಿ ಮಾನ್ಯತೆ ಹೊಂದಿದೆ. ಶೇ. 65ಕ್ಕಿಂತ ಹೆಚ್ಚಿನ ಅಂಕಗಳೊಂದಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಸರರ್ಸಿ.ವಿ. ರಾಮನ್ ವಿದ್ಯಾರ್ಥಿ ವೇತನ ನೀಡಲಾಗುವುದು ಎಂದು ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.
ಮೌಲ್ಯಗಳಿಲ್ಲದ ಶಿಕ್ಷಣ ಪರಿಪೂರ್ಣವಲ್ಲ
ಶಿವಮೊಗ್ಗ: ಶಿಕ್ಷಣದೊಂದಿಗೆ ಉತ್ತಮ ಮೌಲ್ಯಗಳೂ ಜೊತೆಗಿರಬೇಕು. ಮೌಲ್ಯಗಳಿಲ್ಲದ ಶಿಕ್ಷಣ ಹಾಗೂ ಬದುಕು ಪರಿಪೂರ್ಣವಾಗಲ್ಲ. ಮೌಲ್ಯಗಳನ್ನು ಜೊತೆಗಿಟ್ಟುಕೊಂಡು ದುಶ್ಚಟಗಳಿಂದ ದೂರವಾಗಿ, ಒಳ್ಳೆಯ ಸದ್ಗುಣ ನಡತೆಯಿಂದ ಬದುಕಬೇಕು ಎಂದು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪಿಇಎಸ್‌ನಲ್ಲಿ ನಡೆದ ಸಿಬಿಎಸ್‌ಸಿ 11ನೇ ತರಗತಿ ಹಾಗೂ ಪ್ರಥಮ ಪಿಯುಸಿ ಪ್ರಾರಂಭೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯಾವುದೇ ಬದಲಾವಣೆ ಆಗಬೇಕಾದರೆ ವಿದ್ಯಾರ್ಥಿಗಳಿಂದ ಯುವ ಸಮೂಹದಿಂದ ಸಾಧ್ಯ. ಅವ್ಯವಸ್ಥೆಯಿಂದ ಹೊರಬಂದು ಮೌಲ್ಯಾಧಾರಿತ ಶಿಕ್ಷಣ ಪಡೆದು ಭವ್ಯ ಸಮಾಜ ಕಟ್ಟುವ ಪ್ರಯತ್ನ ಮಾಡೋಣ ಎಂದರು.
ದೇಶದಲ್ಲಿ ಶೇ.36 ಜನ ಬಡತನ ರೇಖೆಗಿಂತ ಕೆಳಗಿದ್ದಾರೆ. ಶೇ.60 ಜನ ಅವಿದ್ಯಾವಂತ ಮಹಿಳೆಯರಿದ್ದಾರೆ. ಶಾಲೆಯಿಂದ ಹೊರಗೆ ಅನೇಕ ಮಕ್ಕಳಿದ್ದಾರೆ,ಸುತ್ತಲ ಸಮಾಜ ಬಹಳ ಕಷ್ಟದಲ್ಲಿದೆ. ಅದನ್ನು ಸರಿಪಡಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು. ಸಂಸದ, ಪಿಇಎಸ್ ಕಾರ್ಯದರ್ಶಿ ರಾಘವೇಂದ್ರ ಮಾತನಾಡಿ, ಇಲ್ಲಿನ ವಿದ್ಯಾರ್ಥಿಗಳು ಶೇ.100 ಫಲಿಂತಾಶ ಪಡೆದಿದ್ದಾರೆ. ಶಿವಮೊಗ್ಗದಲ್ಲಿ 4500ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅದೇ ರೀತಿ ಜಾಗತಿಕ ಸ್ಪರ್ಧೆಗೆ ಸರಿಸಾಟಿ ನೀಡಬಲ್ಲ ಶಿಕ್ಷಣವನ್ನು ಸಂಸ್ಥೆ ನೀಡುತ್ತಿದೆ ಎಂದರು. ಬಿ.ವೈ. ಅರುಣಾದೇವಿ, ಸುರೇಶ್ಚಂದ್ರ, ನಾಗೇಶ್ವರರಾವ್, ಶಿವಕುಮಾರ್ ಇದ್ದರು.