ಸರ್ವ ಸದಸ್ಯರ ಸಭೆ
ಶಿವಮೊಗ್ಗ: ಮಲೆನಾಡು ಮುದ್ರಕರ ಸಂಘ ಜೂನ್ 16ರಂದು ಬೆಳಿಗ್ಗೆ 10ಗಂಟೆಗೆ ವಿನಾಯಕ ನಗರದ ರೋಟರಿ ಮಿಡ್ಟೌನ್ ಸಭಾಂಗಣದಲ್ಲಿ ಸಂಘದ ಸರ್ವ ಸದಸ್ಯರ ಸಭೆ ಹಾಗೂ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಅವರಿಗೆ ಅಭಿನಂದನೆ ಕಾರ್ಯಕ್ರಮ ಏರ್ಪಡಿಸಿದೆ. ಇದೇ ಸಂದರ್ಭದಲ್ಲಿ ಆಯ್ದ ವಿದ್ಯಾರ್ಥಿಗಳಿಗೆ ಉಚಿತ ನೋಟ್ಬುಕ್ ವಿತರಣೆ ಹಾಗೂ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 2ಗಂಟೆವರೆಗೆ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಎಂ. ಮಾಧವಾಚಾರ್ ತಿಳಿಸಿದ್ದಾರೆ.
ಯಕ್ಷಗಾನ ತರಬೇತಿ ಶಿಬಿರ
ಶಿವಮೊಗ್ಗ: ಯಕ್ಷ ಕುಟೀರ ಸಂಸ್ಥೆ ಯಕ್ಷಗಾನ ನೃತ್ಯಾಭಿನಯ ಕಲಿಕಾ ತರಬೇತಿ ಶಿಬಿರ ಆರಂಭಿಸಿದ್ದು, ಕಲಿಕಾ ತರಗತಿಗಳು ಪ್ರತಿ ಶನಿವಾರ ಮತ್ತು ಭಾನುವಾರ ಬಿ.ಎಚ್. ರಸ್ತೆಯ ಸ್ಕೌಟ್ ಭವನದಲ್ಲಿ ನಡೆಯಲಿದೆ. ಯಕ್ಷಗಾನ ಕಲೆಯ ಹೆಜ್ಜೆ, ಮಾತುಗಾರಿಕೆ ಮತ್ತು ಮುಖವರ್ಣಿಕೆ ಮತ್ತಿತರ ಕಲೆಯನ್ನು ಕಲಿಯಲು ಆಸಕ್ತಿ ಇರುವ ಮಕ್ಕಳು ತರಗತಿಗೆ ಸೇರಬಹುದು ಎಂದು ಸಂಸ್ಥೆಯ ಕಾರ್ಯದರ್ಶಿ ಕೆ.ಎಸ್. ಚಂದ್ರಶೇಖರ ತಿಳಿಸಿದ್ದಾರೆ. ವಿವರಗಳಿಗಾಗಿ- 9845327363.
ಯಕ್ಷಗಾನತರಬೇತಿ ಶಿಬಿರ
ಶಿವಮೊಗ್ಗ: ಶ್ರೀ ಯಕ್ಷಾನುಗ್ರಹ ಸಂಸ್ಕೃತಿ ಸಂವರ್ಧನಾ ಸಭಾ ಆಸಕ್ತರಿಗಾಗಿ ಜೂನ್ 30ರಿಂದ ಯಕ್ಷಗಾನ ತರಬೇತಿ ಶಿಬಿರ ಏರ್ಪಡಿಸಿದೆ. ಪರಮೇಶ್ವರ ಹೆಗಡೆ ಐನಬೈಲು ಅವರ ಮಾರ್ಗದರ್ಶನದಲ್ಲಿ ತರಬೇತಿ ನಡೆಯಲಿದ್ದು, ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಭಾದ ಕೆ.ಪಿ. ಮಂಜುನಾಥ ರಾಯ್ಕರರ್ತಿಳಿಸಿದ್ದಾರೆ. ವಿವರಗಳಿಗಾಗಿ- 9945738485.
ಸನ್ಮಾನ ಸಮಾರಂಭ
ಶಿವಮೊಗ್ಗ: ಜಿಲ್ಲಾ ಬಂಜಾರ ಸಂಘದ ಆವರಣದಲ್ಲಿ ಜೂನ್ 17ರಂದು ಸಂಜೆ 5ಗಂಟೆಗೆ ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದ ಪೂರ್ಯನಾಯ್ಕ್ ಅವರಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿದೆ. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಭೋಜನಾಯ್ಕ ವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಪ್ರಮುಖರು ಹಾಗೂ ಚುನಾಯಿತ ಜನಪ್ರತಿನಿಧಿಗಳು, ಸಂಘ, ಸಂಸ್ಥೆಗಳ ಪ್ರಮುಖರು ಆಗಮಿಸುವಂತೆ ಸಂಘದ ನಿರ್ದೇಶಕ ಎಸ್. ದೇವರಾಜ್ಉ ಮಂಡೇನಕೊಪ್ಪ ತಿಳಿಸಿದ್ದಾರೆ.