ಪುಸ್ತಕ ಬಹುಮಾನಕ್ಕಾಗಿ ಕೃತಿಗಳ ಆಹ್ವಾನ
ಶಿವಮೊಗ್ಗ: ಕರ್ನಾಟಕ ಸಾಹಿತ್ಯ ಅಕಾಡೆಮಿಯು 2012ನೇ ವರ್ಷದ ಪುಸ್ತಕ ಬಹುಮಾನ ಯೋಜನೆಯಡಿ ಕಾವ್ಯ (ವಚನ, ಹನಿಗವನ), ಕಾದಂಬರಿ, ಸಣ್ಣಕತೆ, ನಾಟಕ, ಲಲಿತ ಪ್ರಬಂಧ, ಪ್ರವಾಸ ಸಾಹಿತ್ಯ, ಜೀವನ ಚರಿತ್ರೆ, ಆತ್ಮಕಥೆ, ಸಾಹಿತ್ಯ ವಿಮರ್ಶೆ, ಗ್ರಂಥ ಸಂಪಾದನೆ, ಮಕ್ಕಳ ಸಾಹಿತ್ಯ, ವಿಜ್‌ಞಾನ ಸಾಹಿತ್ಯ, ಮಾನವಿಕಗಳು, ಅನುವಾದ, ಸಂಕೀರ್ಣ, ಮೊದಲ ಸ್ವತಂತ್ರ ಕೃತಿ ಹಾಗೂ ಕನ್ನಡದಿಂದ ಆಂಗ್ಲ ಭಾಷೆಗೆ ಅನುವಾದಗೊಂಡ ಸಾಹಿತ್ಯ ಪ್ರಕಾರಗಳಿಗೆ ಬಹುಮಾನ ನೀಡಲು ಉದ್ಧೇಶಿಸಿದೆ. ಬಹುಮಾನಕ್ಕೆ ಸಲ್ಲಿಸುವ ಕೃತಿಗಳು 2012ರಲ್ಲಿ ಪ್ರಥಮ ಆವೃತ್ತಿಯಾಗಿ ಪ್ರಕಟಗೊಂಡಿರಬೇಕು. ಕೃತಿಯ ತಾಂತ್ರಿಕ ಪುಟದಲ್ಲಿ ಪ್ರಥಮ ಮುದ್ರಣ-2012 ಎಂದು ಅಚ್ಚಾಗಿರಬೇಕು. ಪ್ರತಿ ಪ್ರಕರಣದಲ್ಲಿ ವಿಮರ್ಶಕರು ಆಯ್ಕೆ ಮಾಡುವ ಒಂದು ಕೃತಿಗೆ ಬಹುಮಾನ ನೀಡಲಾಗುವುದು. ಆಸಕ್ತರು ಪ್ರಕಟಿತ ಪುಸ್ತಕದ ಒಂದು ಸಾದಾ ಪ್ರತಿಯನ್ನು ರಿಜಿಸ್ಟ್ರಾರ್, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಜೆ.ಸಿ.ರಸ್ತೆ, ಬೆಂಗಳೂರು ವಿಳಾಸಕ್ಕೆ ಜುಲೈ 15ರೊಳಗಾಗಿ ಸಲ್ಲಿಸಬೇಕು. ವಿವರಗಳಿಗಾಗಿ ಅಂತರ್ಜಾಲ ತಾಣ ಢಿಢಿಢಿ.್ಞಛ್ಠಟಿಛಡಿಛ್ಞಛಡಝ್ಝಝಿಣಛಛ್ಛಛಜಜಟಣ.್ಟ್ಠ್ಜ ವೀಕ್ಷಿಸುವಂತೆ ಅಕಾಡೆಮಿಯ ರಿಜಿಸ್ಟ್ರಾರ್.ಎಚ್. ಭಾಗ್ಯ ಅವರು ತಿಳಿಸಿದ್ದಾರೆ.