ವಿದ್ಯಾರ್ಥಿ ಸಂಘ ಉದ್ಘಾಟನೆ
ಶಿವಮೊಗ್ಗ: ಇಲ್ಲಿನ ಪುರದಾಳು ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರಸಕ್ತ ಸಾಲಿನ ವಿವಿಧ ಸಂಘಗಳ ಉದ್ಘಾಟನೆಯನ್ನು ಶಾಲೆಯ ಮುಖ್ಯಶಿಕ್ಷಕ ಟಿ.ಆರ್. ಪರಮೇಶ್ವರ್ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ವಿವಿಧ ಸಂಘ, ಸಂಸ್ಥೆಗಳ ಅವಶ್ಯಕತೆಯಿದ್ದು, ತಮ್ಮ ವ್ಯಕ್ತಿತ್ವವನ್ನು ತಿದ್ದಿಕೊಳ್ಳಲು, ಸಮಾಜಕ್ಕೆ ಕೊಡುಗೆ ನೀಡಲು ಇವು ವೇದಿಕೆಯಾಗಲಿವೆ. ಇದನ್ನು ಪ್ರತಿಯೊಬ್ಬ ವಿದ್ಯಾರ್ಥಿ ಬಳಸಿಕೊಳ್ಳಬೇಕು ಎಂದರು.
ಕೇವಲ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೇ ಪೋಷಕರಿಗೂ ಸಂಸ್ಥೆಗಳ ಉಪಯೋಗ ಸಿಗುತ್ತದೆ. ಇದರ ಬಗ್ಗೆ ಅರಿವು ಮೂಡಿಸುವ ಕೆಲಸ ಸಂಸ್ಥೆಗಳ ಸದಸ್ಯರಿಂದ ಆಗಬೇಕು ಎಂದರು.
ಈ ವೇಳೆ ಶಿಕ್ಷಕಿ ಲತಾ, ದೈಹಿಕ ಶಿಕ್ಷಕ ಭೈರಪ್ಪ ಚಕ್ರಸಾಲಿ, ಹೇಮಂತ್ ಕುಮಾರ್, ಮದನ್, ಕೆ.ಸಿ. ಸತೀಶ್, ವಿಶ್ವನಾಥ್ ಇದ್ದರು.