ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸರ್ಕಾರಿ ಯೋಜನೆಗೆ ಪ್ರಚಾರ ಅಗತ್ಯ

Lingaraj Badiger
Updated On : 17 Jun 2013, 10:57 am

ಕ.ಪ್ರ.ವಾರ್ತೆ, ಶಿಕಾರಿಪುರ,  ಜೂ.16
ಸರ್ಕಾರಿ ಆಡಳಿತ ವ್ಯವಸ್ಥೆ ಹಾಗೂ ಮಾಧ್ಯಮದ ಸಮನ್ವಯದ ಪ್ರಚಾರದಿಂದ ಮಾತ್ರ ಸರ್ಕಾರದ ಯೋಜನೆಗಳು ನೇರವಾಗಿ ಜನಸಾಮಾನ್ಯರಿಗೆ ತಲುಪಲು ಸಾಧ್ಯ ಎಂದು ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಅವರು ಅಭಿಪ್ರಾಯಪಟ್ಟರು.
ಪಟ್ಟಣದ ನೂತನ ಪತ್ರಿಕಾ ಭವನದ ಮುಂದುವರಿದ 2ನೇ ಹಂತದ ಕಾಮಗಾರಿ ವೀಕ್ಷಿಸಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬಹುದೊಡ್ಡ ಯೋಜನೆಗಳು ದೊಡ್ಡ ಪತ್ರಿಕೆಗಳ ಮೂಲಕ ಶೀಘ್ರ ಪ್ರಚಾರವಾಗಿ ಜನತೆಗೆ ತಲುಪುತ್ತಿದ್ದು, ಸ್ಥಳೀಯ ಜನತೆಗೆ ಲಭ್ಯವಿರುವ ಸರ್ಕಾರದ ಯೋಜನೆ ಬಗ್ಗೆ ಸ್ಥಳೀಯ ಪತ್ರಿಕೆಗಳು ಹೆಚ್ಚಿನ ರೀತಿಯಲ್ಲಿ ಸ್ಪಂದಿಸಿ ಪ್ರಚಾರ ನೀಡಬೇಕಾಗಿದೆ ಎಂದರು.
ಪ್ರಚಾರದ ಕೊರತೆ: ಸರ್ಕಾರ ಗ್ರಾಮೀಣ ಹಾಗೂ ತಾಲೂಕು ಮಟ್ಟದಲ್ಲಿ ರೈತರಿಗೆ, ಜನಸಾಮಾನ್ಯರಿಗೆ ಯೋಜನೆ  ರೂಪಿಸುತ್ತಿದ್ದು, ಸಮರ್ಪಕ ಪ್ರಚಾರದ ಕೊರತೆಯಿಂದ ತಳಹಂತದ ಅರ್ಹ ಫಲಾನುಭವಿಗಳನ್ನು ತಲುಪುವಲ್ಲಿ ವಿಫಲವಾಗುತ್ತಿದೆ ಎಂದ ಅವರು ಅಧಿಕಾರಿಗಳು, ಪರ್ತಕರ್ತರು ಸರ್ಕಾರದ ಸೌಲಭ್ಯಗಳ ಬಗ್ಗೆ ಪ್ರಚಾರವನ್ನು ವಿವಿಧ ಯೋಜನೆಗಳ ಬಗೆಗಿನ ಸಾಧಕ ಬಾಧಕ ತಿಳಿಸಬೇಕಾದ ಸ್ಥಳೀಯ ಪತ್ರಿಕೆಗಳು ಇನ್ನು ಅಧಿಕವಾಗಿ ಬಲಾಢ್ಯವಾಗಬೇಕಾಗಿದೆ ಎಂದು ಹೇಳಿದರು.
ತಾಲೂಕು ಕಾರ್ಯನಿರತ ಪರ್ತಕರ್ತರ ಸಂಘದ ಅಧ್ಯಕ್ಷ ಕೆ.ಎಸ್. ಹುಚ್ರಾಯಪ್ಪ ಮಾತನಾಡಿ, ತಾಲೂಕಿನಲ್ಲಿ ಈಗಾಗಲೇ ಸಂಘದಿಂದ ವಿವಿಧ ಸರ್ಕಾರಿ ಇಲಾಖೆಯ ಅಧಿಕಾರಿಗಳ ಜತೆಗೆ ಸಂವಾದ ಮತ್ತಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಾಮಾನ್ಯ ಜನತೆಯ ಸಮಸ್ಯೆ ಪರಿಹರಿಸುವ ದಿಸೆಯಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದರು. ಶೀಘ್ರದಲ್ಲಿ ಸ್ಥಳೀಯ ವೈದ್ಯರ ಜತೆಗೆ ಸಂವಾದ ಹಮ್ಮಿಕೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಪಿ.ಐ. ಗಣಾಚಾರಿ, ತಾಪಂ ಇಒ ಡಾ. ಚಂದ್ರಶೇಖರ್, ಪುರಸಭಾ ಮುಖ್ಯಾಧಿಕಾರಿ ಮನೋಹರ್, ಲೋಕೋಪಯೋಗಿ ಇಲಾಖೆ ಎಇಇ ರಮೇಶ್
ಬಾಣದ್, ಮಿಥುನ್, ಸಂಘದ ಚಂದ್ರಶೇಖರ್ ಮಠದ್, ಇ.ಎಚ್. ಬಸವರಾಜ್, ಅರುಣಕುಮಾರ್, ರಘು ಮೊದಲಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement