ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸಾಮಾಜಿಕ ಸ್ವಾಸ್ಥ್ಯಕ್ಕೆ ಸೌಹಾರ್ದತೆ ಮುಖ್ಯ

Lingaraj Badiger
Updated On : 18 Jun 2013, 11:14 am

ಭದ್ರಾವತಿ: ಮಾನವ ಸಂಘಜೀವಿ. ಹುಟ್ಟಿನಿಂದ ಎಲ್ಲರೂ ಬೇರೆಬೇರೆ ಜಾತಿ-ಮತಗಳಿಂದ ಬಂದಿದ್ದರೂ ಸಾಮಾಜಿಕವಾಗಿ ಒಂದು ಕುಟುಂಬದ ಸದಸ್ಯರಿದ್ದಂತೆ ಎಂದು ಡಾ. ಸುಧೀಂದ್ರ ಹೇಳಿದರು.
 ಪಟ್ಟಣದ ಬಸವೇಶ್ವರ ಸಭಾ ಭವನದಲ್ಲಿ ನಡೆದ ಸಿದ್ಧಾರೂಢ ನಗರದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿ, ಸಾಮಾಜಿಕ ಸ್ವಾಸ್ಥ್ಯ ಚೆನ್ನಾಗಿರಲು ಸೌಹಾರ್ದತೆಯಿಂದ ಕೂಡಿದ ಜೀವನ ಅತಿಮುಖ್ಯವೆಂದರು.
ಪ್ರಾಮಾಣಿಕ ಯತ್ನ: ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಎಂ.ಜೆ. ಅಪ್ಪಾಜಿ, ನಗರಸಭೆಯಲ್ಲಿ ಕೆಲಸ ಮಾಡಿಸಿಕೊಳ್ಳಲು ಮಧ್ಯವರ್ತಿಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳು ತಮ್ಮ ಗಮನಕ್ಕೆ ಬಂದಿದ್ದು ಅದನ್ನು ಸಂಪೂರ್ಣವಾಗಿ ನಿವಾರಿಸಲು ತಾವು ಪ್ರಾಮಾಣಿಕವಾಗಿ ಯತ್ನಿಸುವುದಾಗಿ ತಿಳಿಸಿದರು.
ಹೆಚ್ಚಿನ ತೆರಿಗೆ, ಕಡಿಮೆ ಸೌಲಭ್ಯ: ತಮ್ಮ ಹೆಸರನ್ನು ಹೇಳಿಕೊಂಡು ಸಾರ್ವಜನಿಕರನ್ನು ಶೋಷಿಸುವವರ ಬಗ್ಗೆ ಎಚ್ಚರಿಕೆಯಿಂದಿರಲು ತಿಳಿಸಿದ ಶಾಸಕರು ತಮಗೆ ಇದರ ಬಗ್ಗೆ ಅರಿವು ಇದ್ದು ಇಂತಹವರಿಂದ ರಾಜಕಾರಣದಲ್ಲಿ ತಾವು ಅನುಭವಿಸಿದ ಕಷ್ಟಗಳ ಬಗ್ಗೆಯೂ ಅವರು ವಿವರಣೆ ನೀಡಿದರು.  ಸಂಘದ ಅಧ್ಯಕ್ಷ ಶ್ರೀನಿವಾಸ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಿದ್ದಾರೂಢ ನಗರ ನಗರಸಭೆಗೆ ಹೆಚ್ಚಿನ ತೆರಿಗೆ ನೀಡುವ ಬಡಾವಣೆಯಾಗಿದ್ದರೂ ಇಲ್ಲಿಗೆ ನಗರಸಭೆ ಒದಗಿಸಿರುವ ಸೌಲಭ್ಯಗಳು ಕಡಮೆ ಎಂದು ವಿಷಾದಿಸಿದರು. ಮೂಲ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಉದ್ಯಾನವನಕ್ಕಾಗಿ ಮೀಸಲಾಗಿರುವ ಸ್ಥಳವನ್ನು ಯಾವುದೇ ಕಾರಣಕ್ಕೂ ಅನ್ಯ ಉದ್ದೇಶಗಳಿಗೆ ಬಳಸಬಾರದೆಂದು ಒತ್ತಾಯಿಸಿದರು. ಬಡಾವಣೆಯ ಅಧಿಕಾರಿಗಳ ಸಂಘದ ಆವರಣ ಸರಿಯಾಗಿ ಬಳಕೆಯಾಗದಿರುವುದರಿಂದ ಅಲ್ಲಿ ಒಂದು ವ್ಯಾಯಾಮಶಾಲೆಯನ್ನು ಸ್ಥಾಪಿಸಬೇಕೆಂದು ಅವರು ಅಪ್ಪಾಜಿಯವರನ್ನು ಒತ್ತಾಯಿಸಿದರು.ಶಿವರಾಜ್ ಮತ್ತು ಯಶೋದ ವೀರಭದ್ರಪ್ಪ ಉಪಸ್ಥಿತರಿದ್ದರು.  ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಸುಧೀರ್, ಮುಕ್ತಾ ಪ್ರಸಾದ್, ಪುಷ್ಪಲತಾ ಚಂದ್ರಯ್ಯ, ಶಾರದಾ ಶ್ರೀನಿವಾಸ್, ಕುಮಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement