ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಅಕ್ರಮ ಬೀಟೆ ನಾಟಾ ವಶ

Vishwanath S
Updated On : 19 Jun 2013, 12:40 pm

ಕ.ಪ್ರ.ವಾರ್ತೆ , ಹೊಸನಗರ ,  ಜೂ.18
ಅಕ್ರಮವಾಗಿ ಬೀಟೆ ನಾಟ ಸಾಗಿಸುತ್ತಿದ್ದ ವೇಳೆ ದಾಳಿ ನಡೆಸಿದ ವಲಯ ಅರಣ್ಯಾಧಿಕಾರಿ ಮುತ್ಯುಂಜಯಪ್ಪ ನೇತೃತ್ವದ ತಂಡ ವಾಹನ ಸಮೇತ ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ತಾಲೂಕಿನ ನಗರ ವಲಯ ಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ.
ದೂರವಾಣಿ ಮಾಹಿತಿ ಆಧಾರದ ಮೇಲೆ ಮತ್ತಿಕೈ ಗ್ರಾಪಂ ವ್ಯಾಪ್ತಿಯ ಕಾಲಸಸಿ ಬಳಿ ಅಕ್ರಮವಾಗಿ 12 ಬೀಟೆ ತುಂಡುಗಳನ್ನು ಸಾಗಿಸುತ್ತಿದ್ದ ಸಂದರ್ಭದಲ್ಲಿ ದಿಢೀರ್ ದಾಳಿ ನಡೆಸಿದ್ದಾರೆ.
ದಾಳಿ ಸಂದರ್ಭದಲ್ಲಿ ಕಾಲಸಸಿ ನಿವಾಸಿ ಕೆ.ಎಂ.ಶಿವಪ್ಪ ಮತ್ತು ನಿವಣೆ ಪರಮೇಶ್ವರಪ್ಪ ಎಂಬಾತರನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಅಕ್ರಮದಲ್ಲಿ ತೊಡಗಿದ್ದ ಗಜಾನನ ಭಂಡಾರಿ, ಸಂತೋಷ, ಹೊಸೂರು ರಾಘವೇಂದ್ರ, ನಿವಣೆ ನಾಗರಾಜ ಎಂಬುವವರು ತಪ್ಪಿಸಿಕೊಂಡು ಓಡಿ ಹೋಗಿದ್ದಾರೆ.
ಅಕ್ರಮಕ್ಕೆ ಬಳಸಲಾಗಿದ್ದ ವಾಹನ ಸಮೇತ ಬೀಟೆ ತುಂಡುಗಳನ್ನು ವಶ ಪಡಿಸಿಕೊಂಡಿರುವ ಅಧಿಕಾರಿಗಳು ಇಬ್ಬರು ಬಂಧಿತರನ್ನು ನ್ಯಾಯಾಂಗದ ವಶಕ್ಕೆ ನೀಡಿದ್ದಾರೆ. ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿ ಮಧುಕರ್, ದಿಲೀಪ್, ಎಡ್ವರ್ಡ್ ಡಿಸೋಜ್ ಮತ್ತು ಅರಣ್ಯ ಸಿಬ್ಬಂದಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement