ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ನೇಮಕಾತಿ ಪ್ರಕ್ರಿಯೆ ರದ್ದು: ಅಭ್ಯರ್ಥಿಗಳ ಪರದಾಟ

Rashmi Kasaragodu
Updated On : 19 Jun 2013, 12:53 pm

ಶಿವಮೊಗ್ಗ: ರಾಜ್ಯ ಸರ್ಕಾರ ಅರಣ್ಯ ರಕ್ಷಕ ಮತ್ತು ಅರಣ್ಯ ಉಪವಲಯಾಧಿಕಾರಿ ಹುದ್ದೆ ನೇಮಕಾತಿ ಪ್ರಕ್ರಿಯೆಯನ್ನು ರದ್ದು ಪಡಿಸಿದ್ದು, ಮಂಗಳವಾರ ಅರಣ್ಯ ರಕ್ಷಕ ಹುದ್ದೆಯ ದೈಹಿಕ ಪರೀಕ್ಷೆಗಾಗಿ ಬಂದಿದ್ದ ಹೊರ ಜಿಲ್ಲೆಗಳ ಅಭ್ಯರ್ಥಿಗಳು ನಗರದ ನೆಹರು ಕ್ರೀಡಾಂಗಣದಲ್ಲಿ ಪರದಾಡುವಂತಾಯಿತು.  ಅರಣ್ಯ ರಕ್ಷಕ ಹುದ್ದೆಗಳ ನೇರ ನೇಮಕಾತಿಗೆ ಇಂದು ದೈಹಿಕ ಪರೀಕ್ಷೆಗಾಗಿ ಬರುವಂತೆ ಅಭ್ಯರ್ಥಿಗಳಿಗೆ ಇಲಾಖೆ ಸೂಚನೆ ನೀಡಿತ್ತು. ಅದರಂತೆ ನೂರಕ್ಕೂ ಹೆಚ್ಚು ಅಭ್ಯರ್ಥಿಗಳು ಗುಲ್ಬರ್ಗ, ಬಳ್ಳಾರಿ, ಗದಗ, ಹೂವಿನಹಡಗಲಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸಾವಿರಾರು ರೂಪಾಯಿ ಖರ್ಚು ಮಾಡಿಕೊಂಡು ತಡರಾತ್ರಿಯೇ ನಗರಕ್ಕೆ ಆಗಮಿಸಿದ್ದರು.
ಪ್ರಕ್ರಿಯೆ ರದ್ದು: ಅಭ್ಯರ್ಥಿಗಳು ಬೆಳಗ್ಗೆ ನೇಮಕಾತಿ ನಡೆಯಲಿದ್ದ ಕ್ರೀಡಾಂಗಣಕ್ಕೆ ಬಂದಾಗ ನೇಮಕಾತಿ ಪ್ರಕ್ರಿಯೆ ರದ್ದಾಗಿರುವ ವಿಷಯ ತಿಳಿದು ಕಂಗಾಲಾಗಿದ್ದಾರೆ. ಮಂಗಳವಾರದ ಪತ್ರಿಕೆಯಲ್ಲಿ ಈ ಬಗ್ಗೆ  ಜಾಹೀರಾತು ನೀಡಿರುವುದನ್ನು ಕಂಡು ಅಭ್ಯರ್ಥಿಗಳು ಸ್ಥಳದಲ್ಲೇ ಪ್ರತಿಭಟನೆ ನಡೆಸಿ, ಪರಿಹಾರ ನೀಡುವಂತೆ  ಜಿಲ್ಲಾಧಿಕಾರಿಗೆ ಮನವಿ ಮಾಡಿದರು.  ಜಾಹಿರಾತಿನಲ್ಲಿ ಮುಂದೆ ಯಾವ ದಿನಾಂಕದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯುತ್ತದೆ ಎಂದು ಇಲಾಖೆ ತಿಳಿಸದಿರುವುದು ಅಭ್ಯರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement