ಬಸ್ಗೆ ಬೆಂಕಿ: 11 ಆರೋಪಿಗಳ ಬಂಧನ
ಕ.ಪ್ರ.ವಾರ್ತೆ , ಶಿವಮೊಗ್ಗ , ಜೂ.18
ಕಳೆದ ತಿಂಗಳು ನಡೆದ ರಸ್ತೆ ಅಪಘಾತದ ಪ್ರಕರಣಕ್ಕೆ ಸಂಬಂಧಿಸಿದಂತೆ ತುಂಗಾ ನಗರ ಪೊಲೀಸರು 11 ಮಂದಿಯನ್ನು ಬಂಧಿಸಿದ್ದಾರೆ.
ಮಕ್ಕು (22), ಮನ್ಸೂರ್ (18), ರಿಯಾಜ್ (20), ಜಬೀವುಲ್ಲಾ (20), ಅಬೀದುಲ್ಲಾ (33), ಮಸೂದ್ ಬಾಷಾ (22), ಗೌಸ್ ಸಾಬ್ (29), ಹೈದರ್ ಖಾನ್ (20), ಜಾವೀದ್(19), ಮಹಮದ್ಸ್ಮೀವುಲ್ಲಾ (23) ಮತ್ತು ಶಫೀವುಲ್ಲಾ(48) ಬಂಧಿತ ಆರೋಪಿಗಳು.
ಘಟನೆ ವಿವರ: ನಗರ ಬೈಪಾಸ್ ರಸ್ತೆ ಊರಗಡೂರು ಬಳಿ ಕೆಎಸ್ಆರ್ಟಿಸಿ ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಮೃತಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಮಾದರಿಪಾಳ್ಯ, ಊರ್ಗಡೂರು ಮತ್ತು ಸೂಳೆಬೈಲ್ ಕೆಲವು ಕಿಡಿಗೇಡಿಗಳು ಬೈಪಾಸ್ ರಸ್ತೆಯಲ್ಲಿ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ಅಡ್ಡಗಟ್ಟಿ, ಚಾಲಕನ ಮೇಲೆ ಹಲ್ಲೆ ನಡೆಸಿ, ಬಸ್ಗೆ ಬೆಂಕಿ ಹಚ್ಚಿದ್ದರು.
ಪಿಎಸ್ಐ ರವಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಪ್ರಕರಣ ತುಂಗಾ ನಗರ ಠಾಣೆಯಲ್ಲಿ ದಾಖಲಾಗಿದೆ.