ವಕೀಲರ ಸಂಘದ ಪದಾಧಿಕಾರಿಗಳ ಆಯ್ಕೆ
ಸೊರಬ: ತಾಲೂಕು ವಕೀಲರ ಸಂಘದ ಆಯ್ಕೆ ಪ್ರಕ್ರಿಯೆ ಮಂಗಳವಾರ ನಡೆಯಿತು. ಪ್ರಕ್ರಿಯೆಯಲ್ಲಿ 67 ವಕೀಲರುಗಳು ಮತ ಚಲಾಯಿಸಿದರು. 40 ಮತಗಳಿಸುವ ಮೂಲಕ ಅಧ್ಯಕ್ಷರಾಗಿ ಕೆ.ಎಚ್. ತಮ್ಮಣ್ಣಪ್ಪ ಆಯ್ಕೆಯಾದರು. 21 ಮತಗಳಿಸಿ ರಂಗನಾಥ ಚಕ್ರಪಾಣಿ ಕಾರ್ಯದರ್ಶಿಯಾಗಿ ಆಯ್ಕೆಯಾದರು, ಕೆ.ಎಸ್.ಪರಶುರಾಮ್ ಖಜಾಂಚಿಯಾಗಿ ಅವಿರೋಧ ಆಯ್ಕೆಯಾದರು. ಚುನಾವಣಾಧಿಕಾರಿಗಳಾಗಿ ಎಚ್.ಎಸ್. ಚಂದ್ರಶೇಖರ್ ಪಾಲ್ಗೊಂಡಿದ್ದರು. ವಕೀಲರಾದ ಇಂದೂಧರ ಒಡೆಯರ್, ಸಿ. ಶಿವಕುಮಾರ್, ವೈ.ಜಿ. ಪುಟ್ಟಸ್ವಾಮಿ, ಎಂ.ಕೆ. ಯೋಗೇಶ್, ರುಕ್ಮಾಂಗಧರಪ್ಪ, ಸಿ.ಎಸ್. ರುದ್ರಪ್ಪ, ಜಿ.ಎಂ. ಪಾಟೀಲ್ ಮೊದಲಾದವರು ಇದ್ದರು.