ವಿಕಲಚೇತನ ಮಕ್ಕಳಿಗೆ ಪ್ರತಿಭಾ ಪುರಸ್ಕಾರ
ಶಿವಮೊಗ್ಗ: ನಿರಂತರ ಚಾರಿಟಬಲ್ ಟ್ರಸ್ಟ್ ಆಚಾರ್ಯ ತುಳಸಿ ವಾಣಿಜ್ಯ ಕಾಲೇಜಿನ ಚಂದನ ಸಭಾಂಗಣದಲ್ಲಿ ವಿಕಲಚೇತನ ಮಕ್ಕಳಿಗಾಗಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಿತ್ತು.
ನಗರದ ಶಾರದಾ ಅಂಧರ ವಿಕಾಸ ಕೇಂದ್ರ ಹಾಗು ತರಂಗ ಸಂಸ್ಥೆಯ ಒಟ್ಟು 14ಜನ ವಿಕಲಚೇತನ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷೆ ಸುಧಾ ಪರಮೇಶ್ವರಪ್ಪ ಹಾಗೂ ಆಚಾರ್ಯ ತುಳಸಿ ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ನಾಗರಾಜ್,
ಉಪ ಪ್ರಾಂಶುಪಾಲ ಮಂಜುನಾಥ್, ಫಾದರ್ ಫೌಲ್ ಡಿಸೋಜ, ಉಮಾಮೂರ್ತಿ, ಟ್ರಸ್ಟ್ ಕಾರ್ಯದರ್ಶಿ ಚೈತ್ರ ಮೊದಲಾದವರು ಇದ್ದರು.