ಶಿರಾಳಕೊಪ್ಪ ಸುತ್ತಮುತ್ತ ಜ್ವರ ಬಾಧೆ
ಶಿರಾಳಕೊಪ್ಪ: ಪಟ್ಟಣದ ಸುತ್ತಮುತ್ತಲ ಗ್ರಾಮಗಳಲ್ಲಿ ಜ್ವರ ಕಾಣಿಸಿಕೊಂಡಿದ್ದು, ನಿಯಂತ್ರಣಕ್ಕೆ ಬಾರದೇ ರೋಗಿಗಳು ಆಸ್ಪತ್ರೆಗೆ ದಾಖಲಾಗುತ್ತಿದಾದ್ದಾರೆ.
ಮಂಗಳವಾರ ಶಿರಾಳಕೊಪ್ಪ ಸಮುದಾಯ ಆಸ್ಪತ್ರೆಗೆ ಒಟ್ಟು 18 ರೋಗಿಗಳು ವೈರಲ್ ಫೀವರ್ಗೆ ಚಿಕಿತ್ಸೆ ಪಡೆದಿದ್ದಾರೆ. ಇನ್ನು ಕೆಲವರು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಮೊದಲು ವ್ಯಾಪಕವಾಗಿ ಗ್ರಾಮವೇ ಜ್ವರದಿಂದ ಬಳಲಿದ್ದ ಮಳೂರು ಗ್ರಾಮದಲ್ಲಿ ಇನ್ನೂ ಜ್ವರ ಗ್ರಾಮಸ್ಥರನ್ನು ಭಾದಿಸುತ್ತಿದೆ. ಆಸ್ಪತ್ರೆಗೆ ದಾಖಲಾಗಿರುವ ಲೋಕಮ್ಮ ಮತ್ತು ಅವರ ಮಗ ಮಾಲತೇಶಪ್ಪಗೆ ಚಿಕನ್ಗುನ್ಯ ಇರಬಹುದೆಂದು ಶಂಕಿಸಲಾಗಿದ್ದು, ಅವರ ರಕ್ತ ಮಾದರಿಯನ್ನು ಜಿಲ್ಲಾ ಅಸ್ಪತ್ರೆಯ ರಕ್ತ ಪರೀಕ್ಷಾ ಘಟಕಕ್ಕೆ ಕಳುಹಿಸಲಾಗಿದೆ.
ಸೂಕ್ತಚಿಕಿತ್ಸೆ: ಶಿರಾಳಕೊಪ್ಪ ಸಮುದಾಯ ಆರೋಗ್ಯಾಧಿಕಾರಿ ಡಾ.ಮೋಹನ್ ಪತ್ರಿಕೆಯೊಂದಿಗೆ ಮಾತನಾಡಿ, ವಿವಿಧ ಗ್ರಾಮಗಳಿಂದ ರೋಗಿಗಳು ಬರುತ್ತಿದ್ದಾರೆ. ಜ್ವರ ಹೆಚ್ಚಾಗಿ ಕಂಡುಬಂವರನ್ನು ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆ ಕೊಡಲಾಗುತ್ತಿದೆ ಎಂದರು.