ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

'ಅರಣ್ಯ ಒತ್ತುವರಿ ಸಕ್ರಮ ಆದೇಶ ಜಾರಿಗೊಳಿಸಿ'

Lingaraj Badiger
Updated On : 21 Jun 2013, 10:53 am

ಕ.ಪ.ವಾರ್ತೆ  ಶಿರಾಳಕೊಪ್ಪ  ಜೂ.20 ಅರಣ್ಯ ಒತ್ತುವರಿ ಸಕ್ರಮಕ್ಕೆ ಕೇಂದ್ರ, ರಾಜ್ಯ ಸರ್ಕಾರಗಳ ಆದೇಶವನ್ನು ಅರಣ್ಯ ಸಚಿವ ರಮಾನಾಥ ರೈ ತಕ್ಷಣ ಜಾರಿಗೊಳಿಸಬೇಕು ಎಂದು ಜಿಲ್ಲಾ ಕಿಸಾನ್ ಸೆಲ್ ಅಧ್ಯಕ್ಷ ನಗರದ ಮಹದೇವಪ್ಪ ಒತ್ತಾಯಿಸಿದ್ದಾರೆ.
ಶಿರಾಳಕೊಪ್ಪ ಸಮೀಪದ ಬಸವನಂದೀಹಳ್ಳಿಯಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ ಅವರು, 1978ಕ್ಕಿಂತ ಮೊದಲು ಅರಣ್ಯ ಒತ್ತುವರಿದಾರದನ್ನು ಗುರುತಿಸಿದ್ದು, ಅವರಿಗೆ ಈವರೆಗೆ ಭೂಮಿ ಮಂಜೂರು ಮಾಡಿಲ್ಲ. ತಕ್ಷಣ ಮಂಜೂರು ಮಾಡಬೇಕು ಎಂದರು.
ಮಂಜೂರಿಗೆ ಅವಕಾಶ: ತಾಲೂಕು ಮಟ್ಟದಲ್ಲಿ ಅರಣ್ಯ ಸಮಿತಿ ರಚಿಸಿ, 1978ರ ಪೂರ್ವದಲ್ಲಿ ಅರಣ್ಯ ಒತ್ತುವರಿ ಮಾಡಿದ ರೈತರನ್ನು ಗುರುತಿಸಿ 3ಎಕರೆ ಜಮೀನು ಮಂಜೂರು ಮಾಡಲು ಅವಕಾಶವಿದ್ದು, ಕೇಂದ್ರ ಸರ್ಕಾರದ ಆದೇಶದಲ್ಲಿ ಅರ್ಜಿ ಸಲ್ಲಿಸಲು ಸಮಯ ನಿಗದಿ ಇರದಿರುವದರಿಂದ ಅರ್ಜಿ ಪಡೆದು ಮಂಜೂರು ಮಾಡಬೇಕು.    ಹಾಗೆಯೇ ಕೇಂದ್ರ ಸರ್ಕಾರದ 2006ರ ಅರಣ್ಯ ಹಕ್ಕು ಕಾಯಿದೆಯಲ್ಲಿ 5ವರ್ಷದಿಂದ ಪರಿಶಿಷ್ಟ ಪಂಗಡದವರ ಸ್ವಾಧೀನದಲ್ಲಿದ್ದಲ್ಲಿ ಹಾಗೂ ಇತರರಿಗೆ 3 ತಲೆಮಾರಿನಿಂದ ಸ್ವಾಧೀನದಲ್ಲಿ ಇದ್ದರೆ ಅವರಿಗೆ ಮಂಜೂರು ಮಾಡಲು ರಾಜ್ಯ ಸರ್ಕಾರ ಸಮಗ್ರ ಕಾನೂನು ಜಾರಿಗೆ ತರಬೇಕು. ಹಾಗೆಯೇ ಈ ಕಾಯಿದೆಯಲ್ಲಿ ಅರ್ಜಿ ಸಲ್ಲಿಸುವ ರೈತರಿಗೆ ಅರ್ಜಿ ವಿಲೆವಾರಿ ಆಗುವವರೆಗೆ ಅವರನ್ನು ಒಕ್ಕಲೆಬ್ಬಿಸಬಾರದು ಎಂದರು.
ಮೊಕದ್ದಮೆ ಹಿಂಪಡೆಯಿರಿ: ಅರಣ್ಯ ವಾಸಿಗಳನ್ನು ಸುಪ್ರೀಂ ಕೋರ್ಟ್ ಆದೇಶದಂತೆ ತೆರವುಗೊಳಿಸುತ್ತಿರುವದನ್ನು ತಡೆಹಿಡಿದು, ಈಗಾಗಲೇ ಅರಣ್ಯ ಇಲಾಖೆಯವರು ರೈತರ ಮೇಲೆ ಹೂಡಿರುವ ಮೊಕದ್ದಮೆ ಹಿಂದೆ ಪಡೆಯಬೇಕು ಎದರು.
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಕೆಲ ಗ್ರಾಮಗಳ ರೈತರು 1978ರ ಪೂರ್ವದಿಂದಲೂ ಸ್ವಾಧೀನದಲ್ಲಿ ರುವ ದಾಖಲೆಗಳು ಇದ್ದರೂ ಅವರನ್ನು ಜಮೀನಿನಿಂದ ಹೊರಹಾಕಿ 87ಜನರ ಮೇಲೆ ಅರಣ್ಯ ಇಲಾಖೆ ಪ್ರಕಣ ದಾಖಲಿಸಿದ್ದು, ಆ ಪ್ರಕರಣವನ್ನು ಕೂಡಲೇ ವಾಪಾಸ್ ಪಡೆಯಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.  
ತಾಲೂಕಿನ ಬಸವನಂದಿಹಳ್ಳಿ ಸೇರಿದಂತೆ ಕೆಲವರ ಬಳಿ ಇರುವ ಪಹಣಿಯಂತಹ ದಾಖಲೆ ಇದ್ದು, ಅಂತಹರನ್ನು ಅರಣ್ಯ ಇಲಾಖೆ ತೆರವುಗೊಳಿಸಲು ಪ್ರಯತ್ನಿಸುವದನ್ನು ಜಿಲ್ಲಾ ಕಿಸಾನ್ ಸೆಲ್ ವಿರೋಧಿಸುತ್ತದೆ ಎಂದು ತಿಳಿಸಿದರು.
ಮುಖಂಡ ಎಸ್ಸಿಎಸ್ಟಿ ಅಧ್ಯಕ್ಷ ಶಿವಾನಂದಪ್ಪ, ಹರಿಗೆ ಪುಟ್ಟಪ್ಪ, ಬಾಬುರಾವ್, ಕವಲಿ ನಿರಂಜನ ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement