ಮೂಳೆ ಚಿಕಿತ್ಸೆ
ಶಿವಮೊಗ್ಗ: ಡೆಕ್ಸಾ ಸ್ಕ್ಯಾನಿಂಗ್ ಸೆಂಟರ್ ನಗರದ ಜಗನ್ನಾಥ್ ನರ್ಸಿಂಗ್ ಹೋಂನಲ್ಲಿ ಜೂನ್ 23ರಂದು ಬೆಳಿಗ್ಗೆ 9.30ರಿಂದ ಸಂಜೆ 4ಗಂಟೆವರೆಗೆ ಶೇ. 50ರಷ್ಟು ರಿಯಾಯಿತಿ ದರದಲ್ಲಿ ಡೆಕ್ಸಾ ಯಂತ್ರದಿಂದ ಮೂಳೆ ಸಾಂದ್ರತೆ ಪರೀಕ್ಷಾ ಶಿಬಿರ ಆಯೋಜಿಸಲಾಗಿದೆ. ಸೊಂಟ, ಭುಜ, ಕುತ್ತಿಗೆ ಅಥವಾ ಬೆನ್ನು ನೋವಿನ ತೊಂದರೆಗೆ ಒಳಗಾಗಿರುವವರು. 40 ವರ್ಷ ಮೇಲ್ಪಟ್ಟ ಪುರುಷರು, ಋತು ಸ್ರಾವ ನಿಂತಿರುವ ಎಲ್ಲಾ ಮಹಿಳೆಯರು, ಗರ್ಭಕೋಶ ಚಿಕಿತ್ಸೆಗೆ ಒಳಗಾಗಿರುವರು, ಸಕ್ಕರೆ ಖಾಯಿಲೆ, ರಕ್ತದೊತ್ತಡ, ಆರ್ಥೈಟಿಸ್, ಸ್ತೂಲ ಕಾಯ ಮತ್ತಿತರ ರೋಗಗಳಿಂದ ನರುಳುತ್ತಿರುವವರು ಮೂಳೆ ಸಾಂದ್ರೆತೆಗೆ ಒಳಪಟ್ಟು ಚಿಕಿತ್ಸೆ ಪಡೆಯಬಹುದು ಎಂದು ಸೆಂಟರ್ನ ಎ.ಆರ್. ಜಯಪ್ರಕಾಶ್ ತಿಳಿಸಿದ್ದಾರೆ. ವಿವರಗಳಿಗಾಗಿ- 08182-401323.
ಸ್ಲೆಟ್ ಕೋಚಿಂಗ್
ಶಿವಮೊಗ್ಗ: ನಗರದ ಪದವಿ ಕಾಲೇಜು ಅಧ್ಯಾಪಕರ ವೇದಿಕೆ, ಗೆಳೆಯರ ಬಳಗ ಆಶ್ರಯದಲ್ಲಿ ಜುಲೈ 15ರಿಂದ ನಗರದ ಎಟಿಎನ್ಸಿಸಿ ಕಾಲೇಜು ಆವರಣದಲ್ಲಿ ಸ್ಲೆಟ್ ಕೋಚಿಂಗ್ ತರಗತಿಗಳನ್ನು ಆರಂಭ ಮಾಡಲಿದ್ದು, ಆಸಕ್ತರು ತಮ್ಮ ಹೆಸರು ನೋಂದಾಯಿಸಿಕೊಳ್ಳುವಂತೆ ವೇದಿಕೆ ತಿಳಿಸಿದೆ. ಪ್ರತಿ ನಿತ್ಯ ಸಂಜೆ 5.30ರಿಂದ 7.30ರವರೆಗೆ ವಿಷಯ ತಜ್ಞರಿಂದ ಮಾರ್ಗದರ್ಶನ ಮಾಡಲಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯ ವರ್ಷಾಂತ್ಯದಲ್ಲಿ ಸ್ಲೆಟ್ ಪರೀಕ್ಷೆ ನಡೆಸಲಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಸ್ನಾತಕೋತ್ತರ ಪದವಿಧರರಿಗೆ ಕಡ್ಡಾಯವಾಗಿರುವ ಮೊದಲನೆ ಪ್ರಶ್ನೆ ಪತ್ರಿಕೆ ಜನರಲ್ ಪೇಪರ್ ವಿಷಯದಲ್ಲಿ ತರಬೇತಿ ನೀಡಲಾಗುವುದು ಎಂದು ಬಳಗದ ಅಧ್ಯಕ್ಷ ಪ್ರೊ.ಕೆ.ವಿ. ಸಜ್ಜನ್ ಶೆಟ್ಟರ್ ತಿಳಿಸಿದ್ದಾರೆ. ವಿವರಗಳಿಗಾಗಿ 9980647833.
ಭೂವರಹಾ ಸ್ವಾಮಿಯ ಹೋಮ
ಶಿವಮೊಗ್ಗ: ವೆಂಕಟೇಶನಗರದ ಶ್ರೀ ವೆಂಕಟೇಶ್ವರ ದೇವಾಲಯದಲ್ಲಿ ಜೂನ್ 23ರಂದು ಲೋಕಕಲ್ಯಾಣಾರ್ಥವಾಗಿ ಶ್ರೀ ಭೂವರಹಾ ಸ್ವಾಮಿಯ ಹೋಮ ಏರ್ಪಡಿಸಲಾಗಿದೆ. ಬೆಳಿಗ್ಗೆ 10.30 ರಿಂದ 1ಗಂಟೆವರೆಗೆ ಪುರ್ಣಾಹುತಿ ಹೋಮ, ಮಹಾಮಂಗಳಾರತಿ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಾಲಯ ಆರ್ಚಕ ವೃಂದ ತಿಳಿಸಿದೆ. ವಿವರಗಳಿಗಾಗಿ- 9379268081.
ಸನ್ಮಾನ ಸಮಾರಂಭ
ಶಿವಮೊಗ್ಗ: ಬಬ್ಬೂರುಕಮ್ಮೆ ಸೇವಾ ಸಮಿತಿ ಜೂನ್ 23ರಂದು ಸಂಜೆ 6ಕ್ಕೆ ಕೋಟೆ ರಸ್ತೆಯ ಗಾಯಿತ್ರಿ ದೇವಸ್ಥಾನದಲ್ಲಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಹಾಗೂ ನಗರಸಭೆ ಸದಸ್ಯೆ ಸುರೇಖ ಮುರಳೀಧರ್ ಅವರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ. ಸಮಿತಿಯ ಎಲ್ಲಾ ಸದಸ್ಯರು ಕಾರ್ಯಕ್ರಮಕ್ಕೆ ಆಗಮಿಸುವಂತೆ ಸಮಿತಿಯ ಕಾರ್ಯದರ್ಶಿ ಎಸ್. ನಾಗೇಶ್ ತಿಳಿಸಿದ್ದಾರೆ.