ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

'ವೈನ್ ಶಾಪ್ ತೆರೆಯದಿರಿ'

Lingaraj Badiger
Updated On : 21 Jun 2013, 11:01 am

ಶಿವಮೊಗ್ಗ: ಶಂಕರ ಮಠದ ವೃತ್ತದ ಎದುರಿನಲ್ಲಿ ಕೆಲವರು ವೈನ್ ಶಾಪ್ ತೆರೆಯಲು ಹುನ್ನಾರ ನಡೆಸಿದ್ದು, ವೈನ್ ಶಾಪ್ ತೆರೆಯಲು ಅವಕಾಶ ನೀಡಬಾರದು ಎಂದು ಶಂಕರ ಸೇವಾ ಸಮಿತಿ ಒತ್ತಾಯಿಸಿದೆ. ಈಗಾಗಲೇ ಅಬಕಾರಿ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಗಿದ್ದು, ಮನವಿಗೆ ಪೂರಕವಾಗಿ ಅಬಕಾರಿ ನಿರೀಕ್ಷಕರು ಸ್ಥಳ ಪರಿಶೀಲನೆ ಮಾಡಿ, ಈ ಜಾಗದಲ್ಲಿ ದೇವಸ್ಥಾನ, ವಿದ್ಯಾರ್ಥಿ ನಿಲಯ, ಕಲ್ಯಾಣ ಮಂದಿರ, ಶಂಕರಮಠ, ನಿಮಿಷಾಂಬ ದೇವಸ್ಥಾನ ಹಾಗೂ ಕಾರ್ಮಿಕರ ವಿಮಾ ಕಚೇರಿ ಇರುವುದರಿಂದ ವೈನ್ ಶಾಪ್ ತೆರೆಯಲು ಅವಕಾಶವಿಲ್ಲ ಎಂಬ ವರದಿಯನ್ನು ನೀಡಿದೆ. ಜಿಲ್ಲಾಡಳಿತ ಇದ್ಯಾವುದನ್ನು ಗಮನಿಸದೆ ವೈನ್ ಶಾಪ್ ತೆರೆಯಲು ಹುನ್ನಾರ ನಡೆಸುತ್ತಿದೆ. ಇದರಿಂದ ಈ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರು, ಭಕ್ತಾಧಿಗಳಿಗೆ ತೊಂದರೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ವೈನ್ ಶಾಪ್ ತೆರೆಯಲು ಅವಕಾಶ ನೀಡಬಾರದು ಎಂದು ಶಂಕರ ಸೇವಾ ಸಮಿತಿ, ನಿಮಿಷಾಂಬ ದೇವಸ್ಥಾನ ಸಮಿತಿ ಹಾಗೂ ಬ್ರಾಹ್ಮಣ ಮಹಾ ಸಭಾ ಮತ್ತು ವಿದ್ಯಾರ್ಥಿ ನಿಲಯ ಜಿಲ್ಲಾಡಳಿತವನ್ನು ಆಗ್ರಹಿಸಿದೆ.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement