ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಹುಟ್ಟುಹಬ್ಬಕ್ಕಾಗಿ ರಕ್ತದಾನ ಶಿಬಿರ

Lingaraj Badiger
Updated On : 21 Jun 2013, 10:53 am

ಕ.ಪ್ರ.ವಾರ್ತೆ  ಭದ್ರಾವತಿ  ಜೂ.20 ಕಾರ್ಮಿಕರ ಕಲ್ಯಾಣಕ್ಕಾಗಿ ಕಳೆದ ನಾಲ್ಕೈದು ದಶಕಗಳಿಂದ ತೊಡಗಿಸಿಕೊಂಡಿರುವ ಕಾರ್ಮಿಕ ಮುಖಂಡ ಡಿ.ಸಿ. ಮಾಯಣ್ಣ ಅವರ 79ನೇ ಹುಟ್ಟುಹಬ್ಬದ ಅಂಗವಾಗಿ ಕಾರ್ಮಿಕರಿಂದ ರಕ್ತದಾನ ಶಿಬಿರ ಏರ್ಪಡಿಸಿರುವುದು ಅರ್ಥಪೂರ್ಣ ಎಂದು ಶಾಸಕ ಎಂ.ಜೆ. ಅಪ್ಪಾಜಿ ಹೇಳಿದರು.
 ಎಂಪಿಎಂ ವರ್ಕರ್ಸ್ ಯೂನಿಯನ್ ಹಾಗೂ ಶಿವಮೊಗ್ಗದ ರೋಟರಿ ರಕ್ತನಿಧಿಯಿಂದ ಗುರುವಾರ ಬೆಳಗ್ಗೆ ಎಂಪಿಎಂ ಕಂಬೈನ್‌ಡ್ ಆಸ್ಪತ್ರೆ ಆವರಣದಲ್ಲಿ ಕಮ್ಯುನಿಸ್ಟ್ ಪಕ್ಷದ ನಾಯಕ ಡಿ.ಸಿ. ಮಾಯಣ್ಣ ಅವರ 79ನೇ ಹುಟ್ಟುಹಬ್ಬದ ಪ್ರಯುಕ್ತ ಏರ್ಪಡಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
 ಡಿ.ಸಿ. ಮಾಯಣ್ಣ ಅವರ ತಮ್ಮ ಜೀವನದ ಬಹುಭಾಗವನ್ನು ಕಾರ್ಮಿಕರ ಸೇವೆಗಾಗಿಯೇ ಮುಡುಪಾಗಿಟ್ಟಿದ್ದಾರೆಂದು ಎಂಪಿಎಂ ಉದ್ಯೋಗಿಗಳ ಸಂಘದ ಅಧ್ಯಕ್ಷ ಎಸ್. ಚಂದ್ರಶೇಖರ್ ತಿಳಿಸಿದರು.
ಶಿವಮೊಗ್ಗ ರೋಟರಿ ರಕ್ತನಿಧಿಯ ಸತೀಶ್ ರಕ್ತದಾನ ದಾನಗಳಲ್ಲಿ ಅತಿ ಶ್ರೇಷ್ಠ ದಾನವೆಂದರು. ನಗರಸಭಾ ಸದಸ್ಯ ಬದರಿನಾರಾಯಣ, ಇಎಸ್‌ಐ ಆಸ್ಪತ್ರೆ ವೈದ್ಯ ಡಾ. ಸಂತೋಷ್ ಹಾಗೂ ಎಂಪಿಎಂ ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಸದಾವಲಿ ಮಾತನಾಡಿದರು.
 ಡಿ.ಸಿ. ಮಾಯಣ್ಣ, ಎಂಪಿಎಂ ವರ್ಕರ್ಸ್ ಯೂನಿಯನ್ ಮತ್ತು ಶಿವಮೊಗ್ಗ ರೋಟರಿ ರಕ್ತನಿಧಿಯವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಒಟ್ಟು 51 ಮಂದಿ ರಕ್ತದಾನ ಮಾಡಿದರು. ಕಾರ್ಯಕ್ರಮದಲ್ಲಿ ಹಲವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement