ಆನ್ಲೈನ್ನಲ್ಲಿ ಸಕಾಲ
ಶಿವಮೊಗ್ಗ: ಕರ್ನಾಟಕ ಸರ್ಕಾರ ಸಕಾಲ ಸೇವೆಗಳ ಅಧಿನಿಯಮಗಳಡಿಯಲ್ಲಿ ನೀಡುತ್ತಿರುವ ಸೇವೆಯನ್ನು ಆನ್ಲೈನ್ ಮೂಲಕ ಮನವಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಸಕಾಲದ ಮನವಿಗಳನ್ನು ಕಂಪ್ಯೂಟರ್ ಸ್ಕ್ಯಾನರ್, ಪ್ರಿಂಟರ್ ಹಾಗೂ ಇಂಟರ್ನೆಟ್ ವ್ಯವಸ್ಥೆ ಹೊಂದಿರುವ ಸೈಬರ್ ಕೆಫೆ, ಫೋಟೋ ಸ್ಟುಡಿಯೋ, ಶಿವಮೊಗ್ಗ -ಒನ್ ಸೇವಾ ಕೇಂದ್ರ, ಆನ್ಲೈನ್ ರೇಲ್ವೇ, ಬಸ್ ಟಿಕೇಟ್ ಬುಕ್ಕಿಂಗ್ ಸೆಂಟರ್ಗಳಿಗೆ ತೆರಳಿ ಮನವಿ ಸಲ್ಲಿಸಬಹುದಾಗಿದೆ. ಆಸಕ್ತರು ಹೆಚ್ಚಿನ ವಿವರಗಳಿಗಾಗಿ ಸಕಾಲ ಸಹಾಯವಾಣಿ ಕೇಂದ್ರ, ಜಿಲ್ಲಾಧಿಕಾರಿ ಕಚೇರಿಯನ್ನು ಸಂಪರ್ಕಿಸುವಂತೆ ಜಿಲ್ಲಾದಿಕಾರಿ ವಿಫುಲ್ ಬನ್ಸಲ್ ತಿಳಿಸಿದ್ದಾರೆ.
ವಾರ್ಷಿಕೋತ್ಸವ
ಶಿವಮೊಗ್ಗ: ದೈವಜ್ಞ ಹೆಲ್ಪ್ಲೈನ್ 23ರಂದು ಅಂಬೇಡ್ಕರ್ ಭವನದಲ್ಲಿ 11ನೇ ವಾರ್ಷಿಕೋತ್ಸವದ ಯಶಸ್ಸಿನ ಹಾದಿಯಲ್ಲಿ ಎಂಬ ಕಾರ್ಯಕ್ರಮ ಆಯೋಜಿಸಿದೆ. ಮುಖ್ಯ ಅತಿಥಿಯಾಗಿ ಉದ್ಯಮಿ ಕೆ.ಇ. ಕಾಂತೇಶ್, ಜಿಲ್ಲಾ ಚಿನ್ನ, ಬೆಳ್ಳಿ ವರ್ತಕರ ಸಂಘದ ಉಪಾಧ್ಯಕ್ಷ ಡಾ.ಕೆ.ಜಿ. ಮಂಜುನಾಥ್ ರಾಯ್ಕರ್, ದೈವಜ್ಞ ಬ್ರಾಹ್ಮಣ ಸಮಾಜದ ಅಧ್ಯಕ್ಷ ಸುಬ್ರಾಯ್ ವಿ. ಶೇಟ್ ಭಾಗವಹಿಸುವರು. ಅಧ್ಯಕ್ಷತೆಯನ್ನು ರಾಘವೇಂದ್ರ ಕೆ. ಪಾಲನ್ಕರ್ ವಹಿಸಲಿದ್ದಾರೆ.