ಆರೋಗ್ಯದ ಕಡೆ ಗಮನ ನೀಡಿ: ರಾಜೇಂದ್ರ
ಸೊರಬ: ಆಧುನಿಕ ಜೀವನ ಅಳವಡಿಕೆ ಭರಾಟೆಯ ನಡುವೆಯೂ ನಮ್ಮ ದೈಹಿಕ ಸ್ವಾಸ್ಥದ ಬಗ್ಗೆ ಕಾಳಜಿ ವಹಿಸಬೇಕು ಎಂದು ಶಿಕ್ಷಕ ಎಸ್. ರಾಜೇಂದ್ರ ತಿಳಿಸಿದರು.
ತಾಲೂಕು ಗಿಣಿವಾಲದ ಸ.ಹಿ.ಪ್ರಾ. ಶಾಲೆಯಲ್ಲಿ ಸೊರಬ ಸ್ಕೋಡ್ವೇಸ್ ಸಂಚಾರಿ ಆರೋಗ್ಯ ಘಟಕ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿ ಹಮ್ಮಿಕೊಂಡಿದ್ದ ಡೆಂಘೀ ಜ್ವರ ನಿಯಂತ್ರಣ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ನಮಗೆ ದೊರಕುವ ಶಿಕ್ಷಣ ನಮ್ಮ ಸುತ್ತಲ ಪರಿಸರದ ಕುರಿತು ಕಾಳಜಿ ವಹಿಸುವಂತಿದ್ದರೆ, ಶಿಕ್ಷಣ ಸಾರ್ಥಕವಾಗುತ್ತದೆ. ನಾವು ಸ್ವಚ್ಛತೆ ಕಾಪಡಿ ಸಮಾಜಕ್ಕೆ ಸ್ವಚ್ಛತೆ ಕುರಿತು ಅರಿವು ಮೂಡಿಸಬೇಕು ಎಂದರು.
ಆರೋಗ್ಯ ಘಟಕದ ವೈದ್ಯಾಧಿಕಾರಿ ಡಾ.ಸಿ. ಬಸವಣ್ಯಪ್ಪ, ಸಿಬ್ಬಂದಿ ಸಂತೋಷ್ ಎಸ್. ಕಡೂರ್, ಮನೋಜ್ಕುಮಾರ್, ಬಿ.ಸಿ. ಲತಾ, ನಿರ್ಮಲ ಹಾಗೂ ಶಾಲಾ ಶಿಕ್ಷಕ ಎನ್. ಶಿವಪ್ಪ, ಶಾಲಾ ಸಮಿತಿಯವರು, ಮಕ್ಕಳು, ಗ್ರಾಮಸ್ಥರು ಇದ್ದರು.