ನಿವಾರಣೆಯಾಗದ ಜನ ಸ್ನೇಹಿ ಕೇಂದ್ರದ ಸಮಸ್ಯೆ
ಸೊರಬ: ಸುಧಾರಿತ ಆಡಳಿತ ವ್ಯವಸ್ಥೆಯಲ್ಲಿ ಎಲೆಕ್ಟ್ರಾನಿಕ್ ಅಳವಡಿಸಿದ ಬಳಿಕ ಸಮಯದ ಉಳಿತಾಯವಾಗುವ ಬದಲು ಸಮಯಕ್ಕೆ ಬೆಲೆಯೆ ಇಲ್ಲದಂತಾಗಿದೆ ಎಂಬ ಅಳಲು ಪಟ್ಟಣದ ಅಟಲ್ ಜಿ ಜನಸ್ನೇಹಿ ಕೇಂದ್ರದ ಎದುರು ಜಮಾಯಿಸಿದ್ದ ಅನೇಕರಿಂದ ಕೇಳಿಬಂತು.
ಪಟ್ಟಣದ ಒಂದೇ ಒಂದು ಜನಸ್ನೇಹಿ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ, ಆಗಾಗ್ಗೆ ವಿದ್ಯುತ್ ಕಣ್ಣಾಮುಚ್ಚಾಲೆ, ಇರುವ ಯುಪಿಎಸ್ ದುರಸ್ತಿ ಇಲ್ಲದೆ ಅನುಪಯುಕ್ತ, ಇಂಟರ್ನೆಟ್ ಮಧ್ಯೆ ಮಧ್ಯೆ ಕೈಕೊಡುವುದು ಮುಂತಾದ ಸಮಸ್ಯೆಗಳು ಸಾಮಾನ್ಯ ಎನಿಸಿದೆ. ಪ್ರಸ್ತುತ ಸರ್ಕಾರದ ಹಲವಾರು ಯೋಜನೆಗಳ ಸದುಪಯೋಗಕ್ಕಾಗಿ ಜನ ಮುಗಿಬಿದ್ದಿದ್ದು, ಜನಸ್ನೇಹಿ ಕೇಂದ್ರ ಇಷ್ಟೆಲ್ಲ ನ್ಯೂನತೆ ಹೊತ್ತಿರುವುದರಿಂದ ಸೇವೆ ಕನಸಿನ ಮಾತಾಗಿದೆ.
ಒಂದೆಡೆ ಹದವಾದ ಮಳೆ ಆಗಿದೆ, ಅತ್ತ ಕೃಷಿ ಚಟುವಟಿಕೆ ನಡೆಯಬೇಕು, ಇತ್ತ ಶಾಲಾ ಕಾಲೇಜು ಆರಂಭ, ಮಕ್ಕಳ ವಿದ್ಯಾಭ್ಯಾಸ ಇತ್ಯಾದಿ ಒತ್ತಡ, ಈ ನಡುವೆ ಸರ್ಕಾರದ ಯೋಜನೆಗಳು ಕೈತಪ್ಪುತ್ತದೆ ಎಂಬ ಆತಂಕ, ಎಲ್ಲದಕ್ಕೂ ಇಲ್ಲಿಗೆ ಬರಬೇಕು, ಇಲ್ಲಿನ ವ್ಯವಸ್ಥೆ ತೀರಾ ಹದಗೆಟ್ಟಿದ್ದು ಮುಂದಾದರೂ ಈ ಹೊರೆ ತಪ್ಪಿಸಲು ಈ ಆಡಳಿತ ಮುಂದಾದೀತೆ