3 ಯುವತಿಯರ ಕಾಣೆ
ಶಿಕಾರಿಪುರ: ತಾಲೂಕಿನ ವಿವಿಧ ಗ್ರಾಮಗಳಿಂದ 3 ಮಹಿಳೆಯರು ಕಾಣೆಯಾಗಿದ್ದು, ಪತ್ತೆ ಮಾಡಿಕೊಡುವಂತೆ ಗ್ರಾಮಾಂತರ ಠಾಣೆ ಪೊಲೀಸರಿಗೆ ಪೋಷಕರು ದೂರು ನೀಡಿದ್ದಾರೆ.
ತಾಲೂಕಿನ ಸಂಕ್ಲಾಪುರ ಗ್ರಾಮದ ಶಾಂತಮ್ಮ (26) ಕಳೆದ 10ರ ರಾತ್ರಿ 8ಕ್ಕೆ ಮನೆಯಿಂದ ಕಾಣೆಯಾಗಿದ್ದು, ಪತಿ ರವಿಕುಮಾರ್ ದೂರು ನೀಡಿದ್ದಾರೆ. 5.5 ಅಡಿ ಎತ್ತರವಿದು,್ದ ಎಣ್ಣೆಗೆಂಪು ಬಣ್ಣ ದುಂಡು ಮುಖ, ಸಾಧಾರಣ ಮೈಕಟ್ಟು ಹೊಂದಿ ಹಸಿರು, ಹಳದಿ ಹೂವಿನ ಡಿಸೈನ್ ನೈಟಿ ಧರಿಸಿದ್ದಾರೆ. ಕನ್ನಡ, ತಮಿಳು, ತೆಲಗು ಬಾಷೆ ಬರುತ್ತದೆ.
ತಾಲೂಕಿನ ತರಲಘಟ್ಟ ಗ್ರಾಮದಿಂದ ಕನಕಾ (21) 18ರಂದು ಸಂಜೆ ಕಾಣೆಯಾಗಿದ್ದು, ದುಂಡುಮುಖ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣ ಮೈಕಟ್ಟು, ಕನ್ನಡ ತಮಿಳು ಮಾತನಾಡಲಿದ್ದಾರೆ. ಮನೆಯಿಂದ ತೆರಳುವಾಗ ಬಿಳಿ ಹಾಗೂ ಹಸಿರು ಬಣ್ಣದ ಚೂಡಿದಾರ್ ಧರಿಸಿದ್ದಾಗಿ ಅವರ ತಂದೆ ಶಿವಮೊಗ್ಗ ತಾಲೂಕು ಎರುಪಿನ ಕೊಪ್ಪ ಗ್ರಾಮದ ರವಿ ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
ತಾಲೂಕಿನ ಚೆನ್ನಗಳ್ಳಿ ಗ್ರಾಮದ ಅರ್ಚನಾ (19) ಇದೇ 10ರಂದು ಮಧ್ಯಾಹ್ನ ಕಾಣೆಯಾಗಿದ್ದಾರೆ. ದುಂಡು ಮುಖ, 5 ಅಡಿ ಎತ್ತರ, ಬಿಳಿ ಬಣ್ಣ, ಸಾಧಾರಣ ಮೈಕಟ್ಟು, ಹಣೆಯಲ್ಲಿ ಕಪ್ಪು ಕಲೆ ಹೊಂದಿರುವ ಈಕೆ ಕನ್ನಡ ಭಾಷೆ ಬಲ್ಲವಳಾಗಿದ್ದಾಳೆ. ಚಿಕ್ಕಪ್ಪ ಸುರೇಶ್ ಗೌಡ್ರು ಹುಡುಕಿ ಕೊಡುವಂತೆ ದೂರು ನೀಡಿದ್ದಾರೆ.
ಕಾಣೆಯಾಗಿರುವ ಮಹಿಳೆಯರ ಬಗ್ಗೆ ಸುಳಿವು ದೊರೆತಲ್ಲಿ ಗ್ರಾಮಾಂತರ ಠಾಣೆಗೆ (08187-223430)ಅಥವಾ ಡಿವೈಎಸ್ಪಿ ಕಚೇರಿಗೆ(08187-222442) ಸಂಖ್ಯೆಗೆ ಮಾಹಿತಿ ನೀಡುವಂತೆ ಗ್ರಾಮಾಂತರ ಠಾಣೆ ಪಿಎಸ್ಸೈ ಟಿ.ಎನ್. ತಿಪ್ಪೇಶ್ ಮನವಿ ಮಾಡಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.