ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಬತ್ತದ ಬೆಳೆಗೆ ಉತ್ತೇಜನ ನೀಡುವ ಅಗತ್ಯವಿದೆ

Vishwanath S
Updated On : 23 Jun 2013, 11:45 am

ಕ.ಪ್ರ.ವಾರ್ತೆ, ಶಿವಮೊಗ್ಗ, ಜೂ.22
ರಾಜ್ಯದಲ್ಲಿ ಬತ್ತ ಬೆಳೆಯುವ ವಿವಿಧ ಪ್ರದೇಶಗಳ ಭೌಗೋಳಿಕ ಅಧ್ಯಯನ ನಡೆಸಿ, ಬೆಳೆಗೆ ಉತ್ತೇಜನ ನೀಡುವ ಅಗತ್ಯವಿದೆ ಎಂದು ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯ ಸಲಹೆಗಾರ ಡಾ. ಶಂಷೇರ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಕೃಷಿ ಇಲಾಖೆ ನಗರದ ಡಿಸಿಸಿ ಬ್ಯಾಂಕ್‌ನ ಸಭಾಂಗಣದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಬತ್ತದ ಬೆಳೆ ಹೆಚ್ಚಿಸುವ ಕುರಿತು ಶನಿವಾರ ಏರ್ಪಡಿಸಿದ್ದ ರಾಜ್ಯಮಟ್ಟದ ಒಂದುದಿನದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಆಹಾರೋತ್ಪಾದನೆಯಲ್ಲಿ ಅನೇಕ ಸಂಶೋಧನೆಗಳು ನಡೆದಿದ್ದು, ಈ ಸಂಶೋಧನೆಗಳ ಮಾಹಿತಿಯನ್ನು ಅರ್ಹ ರೈತರಿಗೆ ತಲುಪಿಸುವ ಮೂಲಕ ಉತ್ತೇಜನ ನೀಡಬೇಕಾದ ಅಗತ್ಯವಿದೆ ಎಂದು ಹೇಳಿದರು.
ಆಹಾರೋತ್ಪಾದನೆ: ಇತ್ತೀಚಿನ ದಿನಗಳಲ್ಲಿ ಕೃಷಿಯೋಗ್ಯ ಭೂಮಿ ಕೃಷಿಯೇತರ ಚಟುವಟಿಕೆಗಳಿಗೆ ಬಳಕೆಯಾಗುತ್ತಿರುವ ಹಿನ್ನಲೆಯಲ್ಲಿ ಆಹಾರೋತ್ಪಾದನೆ ಕುಂಟಿತಗೊಳ್ಳಲು ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದರು. ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯ ಸಲಹೆಗಾರ ಡಾ.ಟಿ.ಕೆ. ಪ್ರಭಾಕರ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿ, ಏರುತ್ತಿರುವ ಜನಸಂಖ್ಯೆಗೆ ಪೂರಕವಾಗಿ ದೇಶದ ಆಹಾರೋತ್ಪಾದನೆಯಲ್ಲಿ ಕುಂಠಿತವಾಗಿರುವುದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಉತ್ಪನ್ನಗಳ ಹೆಚ್ಚಳಕ್ಕೆ ಯೋಜನೆ ರೂಪಿಸಿ ಅನುಷ್ಠಾನಗೊಳಿಸಿದೆ ಎಂದರು. 12ನೇ ಪಂಚವಾರ್ಷಿಕ ಯೋಜನೆಯಡಿ 12 ದಶಲಕ್ಷ ಟನ್ ಬತ್ತ, 10 ದಶಲಕ್ಷ ಟನ್ ಗೋಧಿ ಹಾಗೂ 3 ದಶಲಕ್ಷ ಟನ್ ದ್ವಿದಳ ಧಾನ್ಯಗಳನ್ನು ಬೆಳೆಯುವ ಗುರಿ ಹೊಂದಲಾಗಿದೆ ಎಂದರು.
ಭೂಮಿಯ ಸಾರ ನಾಶ: ಇತ್ತೀಚಿನ ದಿನಗಳಲ್ಲಿ ಅಕಾಲಿಕ ಮಳೆ, ಮಳೆಯ ಅಭಾವ, ಸ್ಥಳೀಯ ಸಮಸ್ಯೆಗಳು ಹಾಗೂ ಭೂಮಿಯ ಸಾರ ನಾಶಗೊಳ್ಳುತ್ತಿರುವ ಹಲವು ಕಾರಣಗಳಿಂದ ಆಹಾರೋತ್ಪಾದನೆಗೆ ಧಕ್ಕೆ ಉಂಟಾಗಿದೆ ಎಂದ ಅವರು ಸಕಾಲಿಕ ಕ್ರಮಗಳಿಂದ ನ್ಯೂನತೆಯನ್ನು ಸರಿಪಡಿಸಿಕೊಳ್ಳಬಹುದಾಗಿದೆ ಎಂದರು. ಕಾರ್ಯಾಗಾರ ಉದ್ಘಾಟಿಸಿದ ಕರ್ನಾಟಕ ಕೃಷಿ ಮಿಷನ್ ಅಧ್ಯಕ್ಷ ಡಾ.ಎಸ್.ಎ. ಪಾಟೀಲ್ ಮಾತನಾಡಿ, ದೇಶ ಆಹಾರೋತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದ್ದರೂ ಭವಿಷ್ಯದ ದಿನಗಳಲ್ಲಿ ಆಹಾರೋತ್ಪಾದನೆ ಹೆಚ್ಚಳವಾಗದಿದ್ದಲ್ಲಿ ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಪೂರೈಸುವುದು ಕಷ್ಟಕರವಾಗಲಿದೆ ಎಂದು ಹೇಳಿದರು.
ಸೀಮಿತ ಪ್ರದೇಶ: ಬದಲಾಗುತ್ತಿರುವ ಕಾಲಮಾನಕ್ಕನುಗುಣವಾಗಿ ಕೃಷಿಯಲ್ಲಿ ಮಾನವ ಸಂಪನ್ಮೂಲದ ಬಳಕೆ ಕಡಿಮೆಗೊಳಿಸಿ, ಸುಧಾರಿತ ಯಂತ್ರೋಪಕರಣಗಳನ್ನು ಬಳಸಬೇಕು. ರೈತರು ಇರಬಹುದಾದ ಸೀಮಿತ ಪ್ರದೇಶದಲ್ಲಿ ಉತ್ತಮ ಬೆಳೆ ಬೆಳೆಯಲು ಹೆಚ್ಚಿನ ಇಳುವರಿ ಕೊಡುವ ಆಧುನಿಕ ಕೃಷಿ ವಿಧಾನಗಳನ್ನು ಅನುಸರಿಸಬೇಕು. ಇದಕ್ಕಿಂತ ಮುಖ್ಯವಾಗಿ ಮಣ್ಣಿನ ಗುಣಮಟ್ಟ ಸುಧಾರಿಸುವ ಹಾಗೂ ಭೂಸಾರವನ್ನು ಹಾನಿಗೊಳ್ಳದೇ ಸಂರಕ್ಷಿಸುವ ಬಗ್ಗೆಯೂ ಗಮನಹರಿಸಬೇಕು. ಇದರಿಂದಾಗಿ ಉತ್ತಮ ಇಳುವರಿ ನಿರೀಕ್ಷಿಸಬಹುದಾಗಿದೆ. ಇಂತಹ ಸುಧಾರಿತ ಕೃಷಿ ವಿಧಾನಗಳನ್ನು ಅನುಸರಿಸುವುದರಿಂದ ಸಮಯ, ಶ್ರಮ ಮತ್ತು ಹಣ ಉಳಿಸಬಹುದಾಗಿದೆ ಎಂದರು.
ಅರಿವು ಮೂಡಿಸಿ: ಕಡಿಮೆ ಅವಧಿಯಲ್ಲಿ ಹೆಚ್ಚಿನ ಇಳುವರಿ ಬರುವ ಸಂಶೋಧಿಸಿದ ಹಾಗೂ ಭೌಗೋಳಿಕವಾಗಿ ಆಯಾ ಪ್ರದೇಶಕ್ಕೆ ಹೊಂದುವ ಬೀಜಗಳನ್ನು ರೈತರು ಬಳಸುವಂತೆ ಅರಿವು ಮೂಡಿಸಬೇಕೆಂದರು. ಇತ್ತೀಚೆಗೆ ಹನಿನೀರಾವರಿ ಪದ್ದತಿಯನ್ನು ಅಳವಡಿಸಿಕೊಂಡು ಬತ್ತ ಬೆಳೆದ ದೇಶದ ಆಯ್ದ ರಾಜ್ಯಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಇಳುವರಿ ಬಂದಿದೆ ಅಲ್ಲದೇ ಉತ್ಪಾದನಾ ವೆಚ್ಚವೂ ತಗ್ಗಿದೆ ಎಂದು ತಿಳಿಸಿದರು.
ಕನಿಷ್ಠ ಇಳುವರಿ: ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡ ಈಜಿಪ್ಟ್, ವಿಯೆಟ್ನಾಂ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಪ್ರತಿ ಹೆಕ್ಟೇರ್ ಭೂಮಿಯಲ್ಲಿ ಬೆಳೆಯಲಾಗುತ್ತಿರುವ ಬೆಳೆಗಿಂತ ಪ್ರಸ್ತುತ ರಾಜ್ಯದಲ್ಲಿ ಬೆಳೆಯುತ್ತಿರುವ ಇಳುವರಿಯ ಪ್ರಮಾಣ ತೀರಾ ಕನಿಷ್ಠ ಮಟ್ಟದ್ದಾಗಿದೆ ಎಂದರು.
 ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಕಗೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯದ ವಿಶೇಷ ಅಧಿಕಾರಿ ಡಾ.ಡಿ.ಎಂ. ಸಾಲಿಮಠ ಮಾತನಾಡಿ, ಬಿತ್ತನೆ ಬೀಜಗಳ ತಳಿ ಉತ್ತಮವಾಗಿದ್ದಲ್ಲಿ ಸಹಜವಾಗಿ ಯಾವುದೇ ಬೆಳೆಯ ಇಳುವರಿ ಹೆಚ್ಚಾಗಲಿದೆ. ಕೃಷಿ ಕ್ಷೇತ್ರದ ಜ್ವಲಂತ ಸಮಸ್ಯೆಗಳ ಕುರಿತಾದ ವಿಸ್ತೃತ ಅಧ್ಯಯನ ನಡೆಸಿ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಹೇಳಿದರು.
 ಕೃಷಿಕರು ಉತ್ತಮ ಗುಣಮಟ್ಟದ ಆಹಾರೋತ್ಪನ್ನಗಳನ್ನು ಬೆಳೆಯುವಂತಾಗಲು ಪೂರಕ ವಾತಾವರಣ ನಿರ್ಮಿಸುವ ಅಗತ್ಯವಿದೆ ಎಂದ ಅವರು ಎಲ್ಲಾ ಬೆಳೆಗಾರರಿಗೆ ಸಕಾಲಕ್ಕೆ ಉತ್ತಮ ತಳಿಯ ಬೀಜಗಳನ್ನು ವಿತರಿಸಲಾಗುತ್ತಿಲ್ಲದಿರುವುದು ಕೂಡ ಉತ್ಪಾದನೆ ಕುಂಠಿತವಾಗಲು ಕಾರಣವಾಗಿದೆ ಎಂದರು.
 ರೈತರೂ ಸಕಾಲಕ್ಕೆ ಸರಿಯಾಗಿ ಕೃಷಿ ತಠಜತರಲ್ಲಿ ಮಾಹಿತಿ ಪಡೆದು ಬೆಳೆ ಬೆಳೆಯಲು ಮುಂದಾಗಬೇಕು. ಮಾತ್ರವಲ್ಲ ಭೂಮಿಯ ಸಾರ ಸಂರಕ್ಷಣೆಗೆ ಪ್ರಥಮ ಆದ್ಯತೆ ನೀಡಬೇಕೆಂದರು.
ಈ ಸಂದರ್ಭದಲ್ಲಿ ಕೃಷಿ ತಠಜತ ಡಾ. ಕೃಷ್ಣಪ್ಪ, ತಳಿ ವಿಠಜತಜನಿಗಳಾದ ಡಾ.ಎಂ.ಪಿ. ರಾಜಣ್ಣ, ಡಾ.ಸಿ. ರಾಮಚಂದ್ರ, ಡಾ. ಗಣೇಶಬಾಬು, ವಿಶ್ವನಾಥ ಶೆಟ್ಟಿ, ಹನುಮಂತರೆಡ್ಡಿ, ಅಂಬಿಕಾ, ದೀಪಜ, ಪಿ.ಎಚ್. ಗೌಡರ್, ಬೊಮ್ಮಾಯಿ ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ನೆರೆಯ 7ಜಿಲ್ಲೆಗಳ ಕೃಷಿ ಇಲಾಖೆಯ ವಿವಿಧ ಶ್ರೇಣಿಯ ಅಧಿಕಾರಿಗಳು, ತಜ್ಞರು ಹಾಗೂ ಪ್ರಗತಿಪರ ರೈತರು ಭಾಗವಹಿಸಿದ್ದರು. ತೇಜಪ್ಪ ಪ್ರಾರ್ಥಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement