ನೌಕರರ ಸಹಕಾರ ಸಂಘದಲ್ಲಿ ಆರೋಗ್ಯ ಕಾರ್ಡ್
ಶಿವಮೊಗ್ಗ: ಕಸ್ತೂರಬಾ ಆಸ್ಪತ್ರೆಯ ಮಣಿಪಾಲ್ ಆರೋಗ್ಯ ಕಾರ್ಡ್ಗಳು ನಗರದ ದುರ್ಗಿಗುಡಿಯಲ್ಲಿರುವ ಅನುದಾನಿತ ಶಿಕ್ಷಣ ಸಂಸ್ಥೆ ನೌಕರರ ಸಹಕಾರ ಸಂಘದಲ್ಲಿ ದೊರೆಯಲಿದೆ.
ಆಗಸ್ಟ್ 1ರಿಂದ ಒಂದು ವರ್ಷ ವಾಯಿದೆ ಇರುವ ಆರೋಗ್ಯ ಕಾರ್ಡ್ ಒಬ್ಬರಿಗೆ 250, ಗಂಡ, ಹೆಂಡತಿ ಮತ್ತು 21 ವರ್ಷದ ಒಳಗಿನ ಎಷ್ಟೇ ಮಕ್ಕಳಿಗೆ 500, ಇದೇ ಕಾರ್ಡ್ಗಳಿಗೆ ಅರ್ಜಿದಾರರ ತಂದೆ, ತಾಯಿಯನ್ನು ಸೇರಿದರೆ 600 ಪಾವತಿಸಬೇಕು. ತಂದೆ, ತಾಯಿ ಇಬ್ಬರನ್ನು ಸೇರಿಸಿದರೆ 700 ಪಾವತಿ ಮಾಡಬೇಕು. ಕಳೆದ ಬಾರಿ ನೋಂದಾಯಿಸಿದ ಕಾರ್ಡ್ದಾರರು ಈ ಬಾರಿ ನೋಂದಣಿ ಮಾಡಿಸುವಾಗ ಮೇಲೆ ತಿಳಿಸಿದ ದರದಲ್ಲಿ ಶೇ.10ರಷ್ಟು ರಿಯಾಯಿತಿ ನೀಡಲಾಗುವುದು.
ಕಾರ್ಡ್ ಹೊಂದಿರುವ ಹೊರ ರೋಗಿಗಳಿಗೆ ಒಂದು ವರ್ಷಗಳ ಕಾಲ ವೈದ್ಯಕೀಯ ತಪಾಸಣೆ ಶೇ.50ರಷ್ಟು ಮತ್ತು ವಿವಿಧ ಪ್ರಯೋಗಾಲಯ ತಪಸಣಾ ಶುಲ್ಕದಲ್ಲಿ ಶೇ.20 ಹಾಗೂ ಒಳ ರೋಗಿಗಳಾಗಿ ದಾಖಲಾದವರಿಗೆ ಒಟ್ಟು ಶುಲ್ಕದಲ್ಲಿ ಶೇ.25ರಷ್ಟು
ರಿಯಾಯಿತಿ ಇರುತ್ತದೆ. ಮಣಿಪಾಲ್ ಆಸ್ಪತ್ರೆಯಲ್ಲಿ ಖರೀದಿಸಿದ ಔಷಧಿಗಳ ಒಟ್ಟು ಶುಲ್ಕದಲ್ಲಿ ಶೇ.10ರಷ್ಟು ರಿಯಾಯಿತಿ ದೊರೆಯುತ್ತದೆ.
ಈಗಾಗಲೇ ಕಾರ್ಡ್ಗಳ ನೋಂದಣಿ ಆರಂಭವಾಗಿದ್ದು, ಆಸಕ್ತರು ಜುಲೈ 31ರೊಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದು ಮಣಿಪಾಲ್ ಆಸ್ಪತ್ರೆಯ ಆರೋಗ್ಯ ಕಾರ್ಡ್ನ ಜಿಲ್ಲಾ ಪ್ರತಿನಿಧಿ ಅ.ನಾ. ವಿಜಯೇಂದ್ರ ರಾವ್ ತಿಳಿಸಿದ್ದಾರೆ. ವಿವರಗಳಿಗಾಗಿ- 08182-224858.