ರಿಯಾಯಿತಿ ದರದಲ್ಲಿ ಸಸಿಗಳ ಮಾರಾಟ
ಶಿವಮೊಗ್ಗ: ಭದ್ರಾವತಿ ಮೈಸೂರು ಕಾಗದ ಕಾರ್ಖಾನೆಯ ಅರಣ್ಯ ವಿಭಾಗವು ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ಸಕ್ರೆಬೈಲು, ಕೆಳದಿ, ಬಟ್ಟೆಮಲ್ಲಪ್ಪ ಮತ್ತು ಸೊನಲೆಯ ನರ್ಸರಿಗಳಲ್ಲಿ ಬೆಳೆಸಲಾದ ಉತ್ತಮ ತಳಿಯ ನೀಲಗಿರಿ, ಅಕೇಶಿಯಾ, ಅಕೇಶಿಯಾ ಹೈಬ್ರೀಡ್, ಗಾಳಿ ಹಾಗೂ ಇತರೆ ಸಸಿಗಳನ್ನು ಜಿಲ್ಲೆಯ ರೈತರು ಹಾಗೂ ಸಂಘ-ಸಂಸ್ಥೆಗಳಿಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ಉದ್ದೇಶಿಸಿದೆ.
ಆಸಕ್ತರು ಯಾವುದೇ ಅಂಗೀಕೃತ ಬ್ಯಾಂಕಿನಿಂದ ಎಂಪಿಎಂ ಭದ್ರಾವತಿ ಹೆಸರಿಗೆ ಸಲ್ಲುವಂತೆ ಪಡೆದ ಡಿ.ಡಿ.ಯನ್ನು ಸಲ್ಲಿಸಿ, ಸೂಚಿಸಿದ ನರ್ಸರಿಗಳಿಂದ ಸಸಿಗಳನ್ನು ಖರೀದಿಸಬಹುದಾಗಿದೆ. ಜೂನ್, ಜುಲೈ ತಿಂಗಳಲ್ಲಿ ಸಸಿಗಳನ್ನು ನಡೆಲು ಸೂಕ್ತ ಸಮಯವಾಗಿದ್ದು, ಸಸಿಗಳನ್ನು ನೆಡಲು ಅಗತ್ಯವಾದ ಸಲಹೆಯನ್ನು ನಿಗಮದ ತಾಂತ್ರಿಕ ಸಲಹೆಗಾರರಿಂದ ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. ವಿವರಗಳಿಗಾಗಿ ಭದ್ರಾವತಿ, ಸಾಗರ ಮತ್ತು ತೀರ್ಥಹಳ್ಳಿಯಲ್ಲಿರುವ ಎಂಪಿಎಂ ಅರಣ್ಯ ಕಚೇರಿಗಳನ್ನು ಅಥವಾ ಎಂಪಿಎಂ ಹಿರಿಯ ವ್ಯವಸ್ಥಾಪಕರಿಂದ ಪಡೆದುಕೊಳ್ಳಬಹುದು. ಮಾಹಿತಿಗಾಗಿ ಸಂಪರ್ಕ ಸಂಖ್ಯೆ ಮೊ-9945195462ನ್ನು ಸಂಪರ್ಕಿಸಬಹುದಾಗಿದೆ.