28ರಂದು ಕಾರ್ಯಾಗಾರ
ಶಿವಮೊಗ್ಗ: ರಾಜ್ಯ ಸಹಕಾರ ಮಹಾಮಂಡಳಿ, ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ ಆಶ್ರಯದಲ್ಲಿ 28ರಂದು ಬೆಳಿಗ್ಗೆ 10.30ಕ್ಕೆ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸಭಾಂಗಣದಲ್ಲಿ 97ನೇ ಸಂವಿಧಾನ ತಿದ್ದುಪಡಿ ಅನ್ವಯ ಸಹಕಾರ ಕಾಯ್ದೆ ತಿದ್ದುಪಡಿ-2012 ಕುರಿತು ಒಂದು ದಿನದ ಕಾರ್ಯಾಗಾರ ಏರ್ಪಡಿಸಿದೆ. ರಾಜ್ಯ ಆಪೆಕ್ಸ್ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ್ ಗೌಡ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯಅತಿಥಿಯಾಗಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ರಾಜ್ಯ ಸಹಕಾರ ಮಂಡಳಿಯ ನಿರ್ದೇಶಕ ಹನುಮಂತೇಗೌಡ, ಬಿ.ಜಿ. ವೆಂಕಟೇಶ್ಗೌಡ, ಎಂ.ಬಿ. ಚನ್ನವೀರಪ್ಪ, ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಸಿ.ಎಸ್. ಪುಟ್ಟರಾಜ್ ಮತ್ತಿತರರು ಪಾಲ್ಗೊಳ್ಳುವರು. ಅಧ್ಯಕ್ಷತೆಯನ್ನು ಸಹಕಾರ ಯೂನಿಯನ್ ಅಧ್ಯಕ್ಷ ಬಿ.ಡಿ. ಭೂಕಾಂತ್ ವಹಿಸಲಿದ್ದಾರೆ ಎಂದು ಮಂಡಳಿ ತಿಳಿಸಿದೆ.