ಮಾಕೋಡು ಗ್ರಾಮದಲ್ಲಿ ನಕ್ಸಲ್ ಪಡೆ?
ಶಿವಮೊಗ್ಗ: ತೀರ್ಥಹಳ್ಳಿ- ಆಗುಂಬೆ ಗ್ರಾಪಂ ವ್ಯಾಪ್ತಿಯ ಮಾಕೋಡು ಗ್ರಾಮದಲ್ಲಿ ನಕ್ಸಲ್ ಪಡೆಯ ಸದಸ್ಯರು ಕಾಣಿಸಿಕೊಂಡ ಸಂಗತಿ ಸೋಮವಾರ ಬೆಳಕಿಗೆ ಬಂದಿದೆ. ಇಬ್ಬರು ಅಪರಿಚಿತ ಯುವತಿಯರು ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದ್ದು, ಇವರು ನಕ್ಸಲ್ ತಂಡದ ಸದಸ್ಯರೆ ಎಂಬುದು ಖಚಿತವಾಗಿಲ್ಲ. ಈ ಮಧ್ಯೆ ಗ್ರಾಮಸ್ಥರು ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಹಾಗೆಯೇ ಈ ಭಾಗಕ್ಕೆ ನಕ್ಸಲ್ರು ಬಂದಿದ್ದಾರೆ ಎಂಬ ಸುದ್ದಿ ಹರಿದಾಡಿದ್ದು, ಪೊಲೀಸರು ಕೂಬಿಂಗ್ ಕಾರ್ಯಾಚರಣೆ ನಡೆಸಿದ್ದಾರೆ.