ಮಾದಕ ವಸ್ತುಗಳ ಸಾಗಾಣಿಕೆಯ ನಿಷೇಧ ದಿನಾಚರಣೆ
ಶಿವಮೊಗ್ಗ: ಸುರಭಿ ಮಹಿಳಾ ಮಂಡಳಿ 26ರಂದು ರಾಜೇಂದ್ರನಗರದ ಸಹ್ಯಾದ್ರಿ ಪ್ರೌಢಶಾಲೆ ಆವರಣದಲ್ಲಿ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಮತ್ತು ಅಕ್ರಮ ಸಾಗಾಣಿಕೆಯ ನಿಷೇಧ ದಿನಾಚರಣೆ ಹಮ್ಮಿಕೊಂಡಿದೆ. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎಚ್. ಕೃಷ್ಣ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯಅತಿಥಿಯಾಗಿ ಡಿವೈಎಸ್ಪಿ ರಾಮನಾಯ್ಕ, ಹೊಯ್ಸಳ ಕಾಲೇಜು ಆಫ್ ಮ್ಯಾನೇಜ್ಮೆಂಟ್ ಪ್ರಾಂಶುಪಾಲ ವಿಲಿಯಂ ಡಿಸೋಜ, ಜಿಲ್ಲಾ ಗ್ರಾಹಕರ ನ್ಯಾಯಾಲಯದ ಸದಸ್ಯೆ ಇ. ಪ್ರೇಮ, ಸಹ್ಯಾದ್ರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಟಿ.ಪಿ. ನಾಗರಾಜ ಪಾಲ್ಗೊಳ್ಳಲಿದ್ದು, ಅಧ್ಯಕ್ಷತೆಯನ್ನು ಮಂಡಳಿಯ ಪ್ರಾಂತೀಯ ಯೋಜನಾ ನಿರ್ದೇಶಕ ವಿ.ವಿ. ಲತಾ ವಹಿಸುವರು ಎಂದು ಮಂಡಳಿ ತಿಳಿಸಿದೆ.