ವಾರ್ಷಿಕೋತ್ಸವ
ಶಿವಮೊಗ್ಗ: ಗಾಂಧಿನಗರದ ಶ್ರೀ ಆದಿ ಶಕ್ತಿ ಚೌಡೇಶ್ವರಿ ಅಮ್ಮನವರ ದೇವಸ್ಥಾನ ಟ್ರಸ್ಟ್ 28 ಮತ್ತು 29ರಂದು ಅಮ್ಮನವರ 11ನೇ ವರ್ಷದ ವಾರ್ಷಿಕೋತ್ಸವ ಹಮ್ಮಿಕೊಂಡಿದೆ. 28ರಂದು ರಾಕ್ಷೋಘ್ನ, ಗಣಪತಿ ಪೂಜೆ, ಪುಣ್ಯ, ವಾಸ್ತು ಹೋಮ, ಬಲಿದಾನ, ಮಂಗಳಾರತಿ ನಡೆಯಲಿದೆ. 29ರಂದು ಬೆಳಿಗ್ಗೆ 8.30ಕ್ಕೆ ಅಭಿಷೇಕ, ಉತ್ಸವ ಮೂರ್ತಿಗೆ ಭಕ್ತಾಧಿಗಳ ಸ್ವ- ಹಸ್ತದಿಂದ ಕುಂಭಾಭಿಷೇಕವಿದ್ದು, 10.30ಕ್ಕೆ ದುರ್ಗಾಹೋಮ, ಲಲಿತ ಸಹಸ್ರನಾಮ ನಡೆಯಲಿದೆ ಎಂದು ಟ್ರಸ್ಟ್ ತಿಳಿಸಿದೆ.
ಉದ್ಘಾಟನೆ
ಶಿವಮೊಗ್ಗ: ಜಿಲ್ಲಾ ಕಾಂಗ್ರೆಸ್ ಸಮಿತಿ 28ರಂದು ಮಧ್ಯಾಹ್ನ 1ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್ ಅವರ ಕಚೇರಿ ಉದ್ಘಾಟನಾ ಸಮಾರಂಭ ಏರ್ಪಡಿಸಿದೆ. ಈ ವೇಳೆ ಜಿಲ್ಲೆಯ ಎಲ್ಲಾ ಶಾಸಕರು, ಸಮಿತಿ ಸದಸ್ಯರು ಉಪಸ್ಥಿತರಿರುವರು ಎಂದು ಕಾರ್ಯದರ್ಶಿ ಯು. ಶಿವಾನಂದ ತಿಳಿಸಿದ್ದಾರೆ.
--