ಇಂದು ಆಂದೋಲನ
ಶಿವಮೊಗ್ಗ: ಕಸ್ತೂರ ಬಾ ಬಾಲಿಕಾ ಪದವಿ ಪೂರ್ವ ಕಾಲೇಜಿ (ಎನ್ಎಸ್ಎಸ್ ಘಟಕ) ನಲ್ಲಿ ಜೂನ್ 26ರಂದು ಮಾದಕ ವಸ್ತುಗಳ ದುರ್ಬಳಕೆ ಮತ್ತು ಕಳ್ಳಸಾಗಾಣಿಕೆ ವಿರುದ್ಧ ಆಂದೋಲನವನ್ನು ನಗರದಲ್ಲಿ ಆಯೋಜಿಸಿದೆ. ಈ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಮಧ್ಯಾಹ್ನ 2 ಗಂಟೆಯಿಂದ ಜಾಥಾ, 3ರಿಂದ ಉಪನ್ಯಾಸ ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.
ನಾಳೆ ಕಿಡ್ನಿ ತಪಾಸಣಾ ಶಿಬಿರ
ಶಿವಮೊಗ್ಗ: ವಾತ್ಸಲ್ಯ ಆಸ್ಪತ್ರೆಯಲ್ಲಿ ಜೂನ್ 27ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಉಚಿತ ಕಿಡ್ನಿ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ. ಮಧುಮೇಹ, ಅಧಿಕ ರಕ್ತದೊತ್ತಡ, ಮೂತ್ರದ ಸೋಂಕು, ಅತಿಯಾದ ಮೂತ್ರ ವಿಸರ್ಜನೆ ಮತ್ತಿತರ ಸಮಸ್ಯೆಯಿಂದ ಬಳುತ್ತಿರುವ ವ್ಯಕ್ತಿಗಳು ಶಿಬಿರದಲ್ಲಿ ಪಾಲ್ಗೊಳ್ಳಬಹುದು ಎಂದು ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಧೀರೇಂದ್ರ ಪಂಢರಿ ತಿಳಿಸಿದ್ದಾರೆ. ವಿವರಗಳಿಗಾಗಿ- 08182- 408100 ಸಂಪರ್ಕಿಸಿ.
30ರಂದು ನಾಡಿ ಪರೀಕ್ಷಾ ಶಿಬಿರ
ಶಿವಮೊಗ್ಗ: ಆರ್ಟ್ ಆಫ್ ಲಿವಿಂಗ್ನ ಶ್ರೀ ರವಿಶಂಕರ ಗುರೂಜಿ ಶ್ರೀ ಆಯುರ್ವೇದ ಟ್ರಸ್ಟ್ ಜೂ.30ರಂದು ಬೆಳಿಗ್ಗೆ 9.30ರಿಂದ ಸಂಜೆ 5ಗಂಟೆವರೆಗೆ ದುರ್ಗಿಗುಡಿಯ ಆಯುಷ್ ಭಂಡಾರದಲ್ಲಿ ನಾಡಿ ಪರೀಕ್ಷಾ ಶಿಬಿರ ಏರ್ಪಡಿಸಿದೆ. ಡಯಾಬಿಟಿಸ್ ಹೃದಯ ಸಂಬಂಧಿ ತೊಂದರೆಗಳು, ಜೀರ್ಣಕ್ರಿಯೆಯ ತೊಂದರೆಗಳು, ಚರ್ಮ, ಸಂಧಿನೋವು, ಅಲರ್ಜಿ, ಅಸ್ತಮಾ ಮತ್ತಿತರ ಕಾಯಿಲೆಗೆ ಚಿಕಿತ್ಸೆ ನೀಡಲಾಗುವುದು ಎಂದು ಟ್ರಸ್ಟ್ ತಿಳಿಸಿದೆ. ವಿವರಗಳಿಗಾಗಿ- 9480415853.
ಮಳೆ: ಧರೆಗುರುಳಿದ ಕಂಬ, ಮರಗಳು
ಸಾಗರ: ತಾಲೂಕಿನ ತಾಳಗುಪ್ಪದಲ್ಲಿ ಸೋಮವಾರ ರಾತ್ರಿ ಸುರಿದ ಭಾರಿ ಮಳೆಯಿಂದ ವಿದ್ಯುತ್ ಕಂಬ ಹಾಗೂ ಕೆಲವು ಕಡೆಗಳಲ್ಲಿ ಮರಗಳು ಧರೆಗುರುಳಿದೆ. ತಾಳಗುಪ್ಪದ ಗೊಲ್ಲರ ಕೇರಿಯಲ್ಲಿ ಗಾಳಿಮಳೆಯಿಂದಾಗಿ ಮೂರು ವಿದ್ಯುತ್ ಕಂಬಗಳು ಮುರಿದು ಬಿದ್ದಿದೆ. ಅದರಲ್ಲಿ ಒಂದು ವಿದ್ಯುತ್ ಕಂಬ ಮನೆಯ ಮೇಲೆ ಬಿದ್ದಿದ್ದರೆ ಇನ್ನೊಂದು ಬಾವಿಯ ಮೇಲೆ ಬಿದ್ದು ಕಟ್ಟೆ ಒಡೆದು ಹೋಗಿದೆ. ಘಟನೆಯಲ್ಲಿ ಯಾವುದೆ ಅನಾಹುತ ಸಂಭವಿಸಲಿಲ್ಲ. ಈ ಭಾಗದಲ್ಲಿ ಮೂವರು ಗ್ರಾಪಂ ಸದಸ್ಯರಿದ್ದರೂ ಯಾರೂ ಸ್ಥಳಕ್ಕೆ ಭೇಟಿ ನೀಡದೆ ಇರುವುದರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯುತ್ ಕಂಬ ಧರೆಗುರುಳಿರುವುದರಿಂದ ಈ ಭಾಗದಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಿದ್ದು, ಮೆಸ್ಕಾಂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.