ಉಚಿತ ತರಬೇತಿ
ಶಿವಮೊಗ್ಗ: ಶ್ರೀ ಜಗದ್ಗುರು ದಾರುಕಾಚಾರ್ಯ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಜೂನ್ 27ರಿಂದ ಕಂಪ್ಯೂಟರ್ ಮತ್ತು ಶೈಕ್ಷಣಿಕ ವಿಷಯಕ್ಕೆ ಸಂಬಂಧಿಸಿದಂತೆ 3 ತಿಂಗಳ ಉಚಿತ ತರಬೇತಿ ಶಿಬಿರ ಹಮ್ಮಿಕೊಂಡಿದೆ. ಮೊಬೈಲ್ ರಿಪೇರಿ (ಬೆಳಿಗ್ಗೆ 10-12ಗಂಟೆವರೆಗೆ), ಕಂಪ್ಯೂಟರ್ (11-1 ಗಂಟೆವರೆಗೆ), ಸ್ಪೋಕನ್ ಇಂಗ್ಲಿಷ್ (12-2 ಗಂಟೆ), ಟೈಲರಿಂಗ್ ಮಧ್ಯಾಹ್ನ 2-4 ಗಂಟೆವರೆಗೆ) ತರಬೇತಿ ನೀಡಲಾಗುವುದು ಎಂದು ಕೇಂದ್ರದ ಪ್ರಾಂಶುಪಾಲರು ತಿಳಿಸಿದ್ದಾರೆ. ವಿವರಗಳಿಗಾಗಿ- 9141940723.
ಸಹಾಯ ಧನ
ಶಿವಮೊಗ್ಗ: ಶ್ರೀ ಕಾಳಿಕಾಪರಮೇಶ್ವರಿ ಕೋ- ಆಪರೇಟಿವ್ ಸೊಸೈಟಿಯು ಆರ್ಥಿಕವಾಗಿ ಹಿಂದುಳಿದ ಸದಸ್ಯರ ಮಕ್ಕಳಿಗೆ ಸಹಾಯಧನ ನೀಡಲು ಸೊಸೈಟಿ ನಿರ್ಧರಿಸಿದ್ದು, 5ನೇ ತರಗತಿ ಮೇಲ್ಪಟ್ಟು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಜುಲೈ 15ರೊಳಗೆ ತಮ್ಮ ಪೋಷಕರ ಸದಸ್ಯತ್ವ ಖಾತೆ ಸಂಖ್ಯೆಯನ್ನು ಅರ್ಜಿಯಲ್ಲಿ ನಮೊದಿಸಿ ಅರ್ಜಿ ಸಲ್ಲಿಸಬಹುದು ಎಂದು ಸೊಸೈಟಿಯ ಉಪಾಧ್ಯಕ್ಷ ಸೋಮೇಶ್ ಪಿ. ಶೇಟ್ ತಿಳಿಸಿದ್ದಾರೆ. ವಿವರಗಳಿಗಾಗಿ- 08182-224265.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.