ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಡಿವಿಎಸ್ ಸೂಪರ್ಸೀಡ್ಗೆ ಆಗ್ರಹ

Rashmi Kasaragodu
Updated On : 26 Jun 2013, 10:51 am


ಕ.ಪ್ರ. ವಾರ್ತೆ   ಶಿವಮೊಗ್ಗ   ಜೂ.25
ನಗರದ ದೇಶಿಯ ವಿದ್ಯಾಶಾಲೆಯ ಆಡಳಿತ ಮಂಡಳಿಯನ್ನು ಸೂಪರ್ಸೀಡ್ ಮಾಡುವಂತೆ ಆಗ್ರಹಿಸಿ ಎನ್ಎಸ್ಯುಐ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.
ನಗರದ ಪ್ರತಿಷ್ಠಿತ ಡಿವಿಎಸ್ ವಿದ್ಯಾಸಂಸ್ಥೆಯಲ್ಲಿ ಈಗ ಶಿಕ್ಷಣದ ಸಂಪೂರ್ಣ ವ್ಯಾಪಾರೀಕರಣ ನಡೆಯುತ್ತಿದೆ. ಸ್ವತಂತ್ರ್ಯ ಹೋರಾಟಗಾರರು ಕಟ್ಟಿ ಬೆಳೆಸಿದ ಈ ಸಂಸ್ಥೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಂದ 26500 ಪಡೆದು ದಾಖಲಾತಿ ನೀಡುತ್ತಿದ್ದಾರೆ. ಹಾಗೆಯೇ ಅದೇ ವಿದ್ಯಾರ್ಥಿಗಳಿಂದ ಹೆಚ್ಚುವರಿ ಪಾಠ ಬೋಧನೆಗೆ 12 ಸಾವಿರ ಪಡೆಯುತ್ತಿದೆ. ಕ್ರಾಸ್ಕೋರ್ಸ್ ಎಂದು ಹೇಳಿಕೊಂಡು ಅಕ್ರಮವಾಗಿ ಪಾಠಮಾಡಲು ಅವಕಾಶಕೊಟ್ಟಿರುವ ಈ ಸಂಸ್ಥೆಯು ಸಂಪೂರ್ಣವಾಗಿ ಭ್ರಷ್ಟರ ಕೂಪವಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ ರು.
ಹರಟೆ ಹೊಡೆಯುವ ಉಪನ್ಯಾಸಕರು: ಸಂಸ್ಥೆಯಲ್ಲಿ ಉಪನ್ಯಾಸಕರು ಕೂಡ ಸದಸ್ಯತ್ವ ಪಡೆದುಕೊಂಡಿದ್ದಾರೆ. 50ರಿಂದ 70ಸಾವಿರ ಸಂಬಳ ಪಡೆಯುವ ಉಪನ್ಯಾಸಕರು ಕಾಲೇಜಿನಲ್ಲಿ ಸಂಬಳಕ್ಕೆ ತಕ್ಕಂತೆ ಪಾಠ ಮಾಡುವುದನ್ನು ಬಿಟ್ಟು ಕಚೇರಿಯಲ್ಲಿ ಕಾಲಹರಣ ಮಾಡುವುದು,  ರಾಜಕಾರಣ ಮಾಡುವುದು ಇವರ ದೈನಂದಿನ ಕಾರ್ಯವಾಗಿದೆ. ಇದರ ಬಗ್ಗೆ ಪ್ರಶ್ನೆಮಾಡಲು ಆಡಳಿತ ಮಂಡಳಿಯು ಇರುವುದಿಲ್ಲ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು.
ಈ ವರ್ಷದ ದಾಖಲಾತಿ ಸಂದರ್ಭದಲ್ಲಿ, ಕೌನ್ಸೆಲಿಂಗ್ ಸಂದರ್ಭದಲ್ಲಿ ವಿದ್ಯಾರ್ಥಿ ಮತ್ತು ಪೋಷಕರ ಮೇಲೆ ಹಲವಾರು ದೌರ್ಜನ್ಯ ಮಾಡಿರುತ್ತಾರೆ ಎಂದು ಆರೋಪಿಸಿರುವ ಎನ್ಎಸ್ಯುಐ ಸದಸ್ಯರು, ಈ ಘಟನೆಗಳ ಬಗ್ಗೆ ಸಾರ್ವಜನಿಕರಾಗಲಿ ಅಥವಾ ವಿದ್ಯಾರ್ಥಿ ಸಂಘಟನೆಗಳಾಗಲಿ ಪ್ರಶ್ನಿಸಿದರೆ ಅವರ ಮೇಲೆಯೇ ಹಲ್ಲೆ ಮಾಡಲು ಕೂಡ ಕೆಲವು ಉಪನ್ಯಾಸಕರು ಹಿಂದೇಟು ಹಾಕುವುದಿಲ್ಲ. ಹಾಗೆಯೇ ಅಂತಹವರ ವಿರುದ್ದ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗುವುದು ಎಂದು ಬೆದರಿಸುತ್ತಾರೆ.
ಸಿಬ್ಬಂದಿಗೆ ಬೆದರಿಕೆ: ಅಲ್ಲಿರುವ ಸಿಬ್ಬಂದಿ ಇವರ ಮಾತುಗಳನ್ನು ಕೇಳದಿದ್ದ ಪಕ್ಷದಲ್ಲಿ ಕೆಲಸದಿಂದ ತೆಗೆಯುತ್ತವೆಂದು ಬೆದರಿಸುತ್ತಾರೆ. ಕಾಲೇಜಿನ ಪಾಠ ಪ್ರವಚನಗಳ ಬಗ್ಗೆ ವಿದ್ಯಾರ್ಥಿ ಸಂಘಟನೆಗಳು ಪ್ರಶ್ನಿಸಿಲು ಹೊರಟರೆ ಸಂಘಟನೆ ವಿರುದ್ಧ ಪ್ರತಿಭಟಿಸಲು ಕಾಲೇಜಿನ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುತ್ತಾರೆ. ವಿದ್ಯಾರ್ಥಿಗಳು ಬಾರದ ಪಕ್ಷದಲ್ಲಿ ನಿಮ್ಮನ್ನು ಅಂತರಿಕ ಅಂಕಕ್ಕೆ ಕಡಿವಾಣ ಪರೀಕ್ಷಾ ಸಂದರ್ಭದಲ್ಲಿ ನೋಡಿಕೊಳ್ಳುತ್ತೇವೆಂದು ಬೆದರಿಸುತ್ತಾರೆ ಎಂದು ತಿಳಿಸಿದ್ದಾರೆ.
ಈ ಕೂಡಲೇ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಈ ಸಂಸ್ಥೆಯನ್ನು ಸೂಪರ್ಸೀಡ್ ಮಾಡುವ ಮೂಲಕ ಮತ್ತು ವ್ಯಾಪಾರಿಗಳ ಹಿಡಿತದಿಂದ ತಪ್ಪಿಸಿ ಈ 2 ವರ್ಷಗಳ ಅವಧಿಯಲ್ಲಿ ನಡೆದಂತಹ ಆಯವ್ಯಯವನ್ನು ಪರಿಶೀಲಿಸುವ ಜೊತೆಗೆ ಉಪನ್ಯಾಸಕರ ಹಾಜರಾತಿ ಮತ್ತು ವಿದ್ಯಾರ್ಥಿಗಳ ಯಾವ ಯಾವ ಹಂತದಲ್ಲಿ ಪಾಠ ಬೋಧನೆಯ ಕ್ರಮದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಮತ್ತು ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಂದು ಸಂಘಟನೆ ಒತ್ತಾಯಿಸುತ್ತದೆ ಎಂದು ಎನ್ಎಸ್ಯುಐ ಜಿಲ್ಲಾಧ್ಯಕ್ಷ ಚೇತನ್ ತಿಳಿಸಿದ್ದಾರೆ.
ಪ್ರತಿಭಟನೆ ಸಂದರ್ಭದಲ್ಲಿ ವಿಕಾಸ, ಶ್ರೀಜಿತ್, ಹುಸೇನ್, ಕೇಶವ, ಲೋಕೇಶ, ಶ್ರೀನಿವಾಸ, ನಿರಂಜನ, ಜಗದೀಶ್, ಶಿವು, ಪ್ರದೀಪ್ ಮತ್ತಿತರರು ಇದ್ದರು.

ಆರೋಪಗಳೇನು?


  ಪ್ರತಿಭಾನ್ವಿತ ವಿದ್ಯಾರ್ಥಿಗಳಿಂದ 26500 ಪಡೆದು ದಾಖಲಾತಿ ನೀಡುತ್ತಿದ್ದಾರೆ. ಹಾಗೆಯೇ ಅದೇ ವಿದ್ಯಾರ್ಥಿಗಳಿಂದ ಹೆಚ್ಚುವರಿ ಬೋಧನೆಗೆ 12 ಸಾವಿರ ಪಡೆಯುತ್ತಿದೆ
  50ರಿಂದ 70ಸಾವಿರ ಸಂಬಳ ಪಡೆಯುವ ಉಪನ್ಯಾಸಕರು ಕಾಲೇಜಿನಲ್ಲಿ ಕಾಲಹರಣ ಮಾಡುತ್ತಿದ್ದಾರೆ
  ಪ್ರಶ್ನಿಸಿದವರ   ಮೇಲೆ   ಹಲ್ಲೆಗೆ ಮುಂದಾಗುವ ಉಪನ್ಯಾಸಕರು
  ಪ್ರಶ್ನಿಸಿದರು ನಿಮ್ಮನ್ನು ಅಂತರಿಕ ಅಂಕಕ್ಕೆ ಕಡಿವಾಣ ಹಾಕಿ ಪರೀಕ್ಷಾ ಸಂದರ್ಭದಲ್ಲಿ ನೋಡಿಕೊಳ್ಳುತ್ತೇವೆಂದು ವಿದ್ಯಾರ್ಥಿಗಳನ್ನುಬೆದರಿಸುತ್ತಾರೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement