ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಆಧಾರ ನೋಂದಣಿಗೆ ನೂಕುನುಗ್ಗಲು; ಲಘು ಲಾಠಿ

Lingaraj Badiger
Updated On : 27 Jun 2013, 10:53 am

ಕ.ಪ್ರ.ವಾರ್ತೆ, ಶಿವಮೊಗ್ಗ,  ಜೂ.26
ಆಯನೂರು ಗ್ರಾಪಂ ವ್ಯಾಪ್ತಿಯಲ್ಲಿ ಆಧಾರ ನೋಂದಣಿ ಕೇಂದ್ರ ಆರಂಭಗೊಂಡಿದ್ದು, ನೂಕುನುಗ್ಗಲು ಉಂಟಾಗಿ, ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ ಘಟನೆ ಬುಧವಾರ ಆಯನೂರಿನಲ್ಲಿ ನಡೆದಿದೆ.
ಸರ್ಕಾರ ನೀಡುವ ವಿದ್ಯಾರ್ಥಿ ವೇತನ, ವಿವಿಧ ಸಬ್ಸಿಡಿ, ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಆಧಾರ್ ಕಡ್ಡಾಯವಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಪೋಷಕರು, ನಾಗರಿಕರು ಸರದಿ ಸಾಲಿನಲ್ಲಿ ನಿಂತು ಅರ್ಜಿ ಪಡೆಯಲು ಅತ್ಯಾಸಕ್ತಿ ತೋರಿಸಿದರು. ಈ ವೇಳೆ ನೋಂದಣಿ ಕೇಂದ್ರದ ಬಳಿ ನೂಕುನುಗ್ಗಲು, ಗೊಂದಲ ಉಂಟಾಗಿ, ಗಲಾಟೆ ಉಂಟಾಯಿತು.
ಈ ವೇಳೆ ಮಧ್ಯ ಪ್ರವೇಶಿಸಿದ ಪೊಲೀಸರು ವಾತಾವರಣ ತಿಳಿಗೊಳಿಸಲು ಪ್ರಯತ್ನಿಸಿದರಾದರೂ ಯಾವುದೇ ಪ್ರಯೋಜನವಾಗದೆ ಪೊಲೀಸರು ಲಾಠಿ ಪ್ರಹಾರ ಮಾಡಿದರು. ಕೆಲ ಸಮಯ ಕೇಂದ್ರದ ಬಾಗಿಲು ಸಹ ಹಾಕಲಾಗಿತ್ತು. ನಂತರ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರು ಸ್ಥಳಕ್ಕೆ ಭೇಟಿ ನೀಡಿ, ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದರು.
ಆಧಾರ ಕಾರ್ಡ್ ನೋಂದಣಿಗೆ ಅರ್ಜಿ ಪಡೆಯಲು ಯಾವುದೇ ಗೊಂದಲ ಬೇಡ. ಇದಕ್ಕೆ ಯಾವುದೇ ಕಾಲಮಿತಿ ಇರುವುದಿಲ್ಲ. ಪ್ರತಿ ನಿತ್ಯ ಅರ್ಜಿ ನೀಡಲಾಗುತ್ತದೆ ಎಂದು ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷರು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರು.
ಪ್ರತಿ ನಿತ್ಯ ಬೆಳಿಗ್ಗೆ 10 ರಿಂದ 10.30ರವರೆಗೆ ಅರ್ಜಿ ವಿತರಿಸಲಿದ್ದು, ಅರ್ಜಿ ಪಡೆದ ಫಲಾನುಭವಿಗಳ ನೋಂದಣಿ ಕಾರ್ಯ ನಡೆಯಲಿದೆ.
ಆಧಾರ್ ಫಲಾನುಭವಿಗಳು ವಿಳಾಸದ ದೃಢಿಕರಣ ಪತ್ರ, ಪಡಿತರ ಚೀಟಿ, ಗುರುತಿನ ಚೀಟಿಗಳನ್ನು ತಂದು ಅರ್ಜಿ ಪಡೆಯಬಹುದು ಹಾಗೂ ಕೇಂದ್ರ ಸರ್ಕಾರದ ಈ ಯೋಜನೆ ಸಂಪೂರ್ಣ ಉಚಿತವಾಗಿದ್ದು, ಯಾಮೊಬ್ಬ ಅಧಿಕಾರಿಗೂ ಹಣ ನೀಡುವ ಅಗತ್ಯವಿಲ್ಲ ಎಂದು ಗ್ರಾ.ಪಂ.ಅಧ್ಯಕ್ಷರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement