ಕಟ್ಟಡ ಉದ್ಘಾಟನೆ
ಶಿವಮೊಗ್ಗ: ಹೊಸಮನೆ ಬಡಾವಣೆಯ ಕೇಶವ ಉಚಿತ ಚಿಕಿತ್ಸಾಲಯದ ನೂತನ ಕಟ್ಟಡದ ಲೋಕಾರ್ಪಣಾ ಸಮಾರಂಭವನ್ನು 28ರಂದು ಬೆಳಿಗ್ಗೆ 8 ಗಂಟೆಗೆ ಆಯೋಜಿಸಲಾಗಿದೆ. ಮುಖ್ಯ ಅತಿಥಿಯಾಗಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಅಖಿಲ ಭಾರತೀಯ ಕುಟುಂಬ ಪ್ರಬೋಧನ ಪ್ರಮುಖ ಕಜಂಪಾಡಿ ಸುಬ್ರಹ್ಮಣ್ಯ ಭಟ್, ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ಹಿಂದು ಸೇವಾ ಪ್ರತಿಷ್ಠಾನ ನಿರ್ದೇಶಕ ಶ್ರೀಧರ್ ಸಾಗರ್, ಮೆಗ್ಗಾನ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಲೇಪಾಕ್ಷಿ, ಮಲೆನಾಡು ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಜಿ.ಎ. ಸುದರ್ಶನ್ ಪಾಲ್ಗೊಳ್ಳಲಿದ್ದು, ಪೇಪರ್ ಪ್ಯಾಕೇಜ್ ಇಂಡಸ್ಟ್ರೀಸ್‌ನ ಶ್ರೀಧರ್ ನಾಯಕ್ ಅಧ್ಯಕ್ಷತೆ ವಹಿಸುವರು ಎಂದು ಚಿಕಿತ್ಸಾಲಯದ ವೈದ್ಯ ಡಾ.ಜೆ.ವಿ. ಆಪ್ಟೆ ತಿಳಿಸಿದ್ದಾರೆ.
ಕಾರ್ಯಾಗಾರ
ಶಿವಮೊಗ್ಗ: ರವೀಂದ್ರ ನಗರದ ಮೈಂಡ್‌ಟ್ರ್ಯಾಕ್ ಸೆಂಟರ್ ಫಾರ್ ಲೈಫ್ ಸ್ಕಿಲ್ಸ್‌ನಲ್ಲಿ 29ರಂದು ಮಧ್ಯಾಹ್ನ 2ಗಂಟೆಯಿಂದ ಸಂಜೆ 5ಗಂಟೆವರೆಗೆ ಶಾಲಾ ಶಿಕ್ಷಕರಿಗಾಗಿ ಮಕ್ಕಳಲ್ಲಿ ಕಂಡುಬರುವ ಶೈಕ್ಷಣಿಕ ಹಾಗೂ ನಡವಳಿಕೆಯ ನ್ಯೂನತೆಗಳನ್ನು ಗುರುತಿಸುವ ಬಗ್ಗೆ ಒಂದು ದಿನದ ಕಾರ್ಯಾಗಾರ ಆಯೋಜಿಸಲಾಗಿದೆ. ಪ್ರವೇಶ ಶುಲ್ಕ 100 ರುಪಾಯಿ ನಿಗದಿ ಮಾಡಿದ್ದು, ಆಸಕ್ತರು 27ರೊಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಸೆಂಟರ್‌ನ ಡಾ. ಸುಮಲತ ಶ್ರೀನಿವಾಸ್ ತಿಳಿಸಿದ್ದಾರೆ. ವಿವಿರಗಳಿಗಾಗಿ- 9986177000.
ಸದಸ್ಯತ್ವಕ್ಕೆ ಆಹ್ವಾನ
ಶಿವಮೊಗ್ಗ: ನಳಂದ ಚೆಸ್ ಅಕಾಡೆಮಿ ವಿದ್ಯಾರ್ಥಿಗಳಿಗಾಗಿ ಪ್ರತಿ ಭಾನುವಾರ ಬೆಳಿಗ್ಗೆ 9 ರಿಂದ 10.30ರವರೆಗೆ ಕ್ವಿಜ್ ಕ್ಲಬ್ ಆರಂಭಿಸಿದ್ದು, ಕ್ಲಬ್‌ಗೆ ಸದಸ್ಯತ್ವ ಬಯಸುವವರು ಜೂನ್ 30 ರ ಬೆಳಿಗ್ಗೆ 9ಗಂಟೆಯೊಳಗೆ ಕಚೇರಿಯಲ್ಲಿ ಬಂದು ಹೆಸರು ನೋಂದಾಯಿಸಬಹುದು ಎಂದು ಅಕಾಡೆಮಿಯ ಕಾರ್ಯದರ್ಶಿ ಶ್ರೀಕೃಷ್ಣ ಉಡುಪ ತಿಳಿಸಿದ್ದಾರೆ. ವಿವರಗಳಿಗಾಗಿ- 9945809662.
ಉದ್ಘಾಟನೆ ಮುಂದಕ್ಕೆ
ಶಿವಮೊಗ್ಗ: ಜುಲೈ 28ರಂದು ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಮೀಪದಲ್ಲಿರುವ ಸಹಕಾರ ಭವನದಲ್ಲಿ ಪ್ರಾಥಮಿಕ ಹಾಗೂ ಫ್ರೌಢಶಿಕ್ಷಣ ಸಚಿವರು ಮತ್ತು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು ಆದ ಕಿಮ್ಮನೆ ರತ್ನಾಕರ್ ಅವರ ಕಚೇರಿಯನ್ನು ಉದ್ಘಾಟನೆ ಮಾಡಬೇಕಾಗಿತ್ತು. ಆದರೆ ಕಚೇರಿ ಸಿದ್ಥತೆ ಪೂರ್ಣಗೊಂಡಿಲ್ಲ. ಅಲ್ಲದೇ ಕಾರಣಾಂತರದಿಂದ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಮುಂದಿನ ದಿನಾಂಕ ತಿಳಿಸಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್. ಟಿ. ಹಾಲಪ್ಪ ತಿಳಿಸಿದ್ದಾರೆ.