ಜೈವಿಕ ಇಂಧನ ತಯಾರಿಕೆ ಕಾರ್ಯಾಗಾರ
ಶಿವಮೊಗ್ಗ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ನವುಲೆಯ ಜೈವಿಕ ಇಂಧನ ತಯಾರಿ ಹಾಗೂ ಪ್ರಾತ್ಯಕ್ಷಿಕೆ ಕೇಂದ್ರದ ಆಶ್ರಯದಲ್ಲಿ ಶೆಟ್ಟಿಹಳ್ಳಿ ಸಮುದಾಯ ಭವನದಲ್ಲಿ ಜೈವಿಕ ಇಂಧನ ತಯಾರಿ ಬಗ್ಗೆ ಮಾಹಿತಿ ಕಾರ್ಯಾಗಾರ ಆಯೋಜಿಸಲಾಗಿತ್ತು.ಜೈವಿಕ ಇಂಧನ ತಯಾರಿಕ ಘಟಕದ ತಾಂತ್ರಿಕ ಮಾಹಿತಿಗಾರ ಚೇತನ್, ಜೈವಿಕ ಇಂಧನ ತಯಾರಿಕೆಗೆ ಬೇಕಾದ ಕಚ್ಚಾವಸ್ತುಗಳು ಹಾಗೂ ಕಚ್ಚಾವಸ್ತುಗಳನ್ನು ಪಡೆಯಬಹುದಾದ ಗಿಡಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ತಾಲೂಕು ಯೋಜನಾಧಿಕಾರಿ ಜಗದೀಶ್ ಅಲ್ಸೆ, ಮೇಲ್ವಿಚಾರಕಿ ಸವಿತ, ಒಕ್ಕೂಟದ ಅಧ್ಯಕ್ಷ ಈಶ್ವರ್, ಸತೀಶ್, ತಾಲೂಕು ಕೃಷಿ ಅಧಿಕಾರಿ ಯೋಗೀಶ್, ಇದ್ದರು.