ಇಂದಿನಿಂದ ಶಾಲಾ ಮಟ್ಟದ ಚೆಸ್ ಪಂದ್ಯಾವಳಿ
ಭದ್ರಾವತಿ: ಭದ್ರಾವತಿ ತಾಲೂಕ್ ಚೆಸ್ ಸಂಸ್ಥೆ ಜೂ.29 ಮತ್ತು ಜೂ.30ರಂದು ಸುಲೋಚನಮ್ಮ ಸ್ಮರಣಾರ್ಥ ತಾಲೂಕು ಮಟ್ಟದ ಒಂದನೇ ಮುಕ್ತ ಹಾಗೂ 3ನೇ ಅಂತರ ಶಾಲಾ ಮಟ್ಟದ ಚೆಸ್ ಪಂದ್ಯಾವಳಿಗಳನ್ನು ಪಟ್ಟಣದ ಕಾಗದನಗರದ ಸೀತಾರಾಮ ಸಮುದಾಯ ಭವನದಲ್ಲಿ ನಡೆಸುತ್ತಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಜೂ.29ರಂದು ಮಧ್ಯಾಹ್ನ 1.15ಕ್ಕೆ ಜಿ.ಪಂ.ಸದಸ್ಯೆ ಉಷಾ ಸತೀಶ್ಗೌಡ ಅವರು ದೀಪ ಬೆಳಗಿಸುವ ಮೂಲಕ ಪಂದ್ಯಾವಳಿಯನ್ನು ಉದ್ಘಾಟಿಸಲಿದ್ದಾರೆ. ಭದ್ರಾವತಿ ತಾಲೂಕು ಚೆಸ್ ಸಂಸ್ಥೆಯ ಉಪಾಧ್ಯಕ್ಷ ಜೆ. ಮಂಜುನಾಥ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗ ಆರ್. ಮಹೇಶ್ ಮತ್ತು ನಗರಸಭಾ ಸದಸ್ಯ ವೆಂಕಟಯ್ಯ ಹಾಗೂ ವಿಶೇಷ ಆಹ್ವಾನಿತರಾಗಿ ಎನ್. ಚಂದಪ್ಪ ಅವರುಗಳು ಭಾಗವಹಿಸುವರು.